ಮೋದಿ ವಿರುದ್ಧ ಟ್ವೀಟ್ ಮಾಡಿದ ಪೈಲಟ್ ವಜಾ!

Prasthutha|

- Advertisement -

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ಹಿರಿಯ ಪೈಲಟ್ ಅನ್ನು ಗೋ ಏರ್ ವಜಾ ಮಾಡಿದೆ. “ಎಲ್ಲಾ ಕಾರ್ಮಿಕರು ಕಂಪನಿಯ ನಿಯಮಗಳು ಮತ್ತು ನೀತಿಗಳನ್ನು ಅನುಸರಿಸಬೇಕು. ಯಾವುದೇ ವ್ಯಕ್ತಿ ಅಥವಾ ಉದ್ಯೋಗಿ ವ್ಯಕ್ತಪಡಿಸುವ ಅಭಿಪ್ರಾಯ ಕಂಪೆನಿಯದ್ದಲ್ಲ. ಕ್ಯಾಪ್ಟನ್ ನನ್ನು ಗೋ ಏರ್ ವಜಾ ಮಾಡಿದೆ” ಎಂದು ಗೋ ಏರ್ ವಕ್ತಾರರು ಹೇಳಿದ್ದಾರೆ.

ನಂತರ ಪೈಲಟ್ ತನ್ನ ಟ್ವೀಟ್‌ಗಾಗಿ ಕ್ಷಮೆಯಾಚಿಸಿದ್ದಾರೆ. “ಪ್ರಧಾನ ಮಂತ್ರಿಯ ಕುರಿತ ನನ್ನ ಟ್ವೀಟ್‌ಗಳು ಅನೇಕರನ್ನು ನೋಯಿಸಿವೆ ಎಂದು ನನಗೆ ತಿಳಿದಿದೆ. ನಾನು ಕ್ಷಮೆಯಾಚಿಸುತ್ತಿದ್ದೇನೆ. ನನ್ನ ವೈಯಕ್ತಿಕ ಅಭಿಪ್ರಾಯಕ್ಕೂ ಗೋ ಏರ್ ಗೂ ಯಾವುದೇ ಸಂಬಂಧವಿಲ್ಲ. ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನನ್ನ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಅದರ ಪರಿಣಾಮಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಪೈಲಟ್ ತಿಳಿಸಿದ್ದಾರೆ.

- Advertisement -

ಗೋ ಏರ್ ಪೈಲಟ್ ತನ್ನ ವಿವಾದಾತ್ಮಕ ಟ್ವೀಟ್ ಅನ್ನು ಗುರುವಾರ ಪೋಸ್ಟ್ ಮಾಡಿದ್ದರು.

Join Whatsapp