ಮಂಗಳೂರು: ಸುಳ್ಯದ ಪಿಎಫ್’ಐ ಕಚೇರಿಯನ್ನು NIA (ರಾಷ್ಟ್ರೀಯ ತನಿಖಾ ದಳ) ಜಪ್ತಿ ಮಾಡಿದೆ.
ಸುಳ್ಯ ಗಾಂಧಿ ನಗರದ ಅಲೆಟ್ಟಿ ರೋಡಿನ ತಾಹಿರಾ ಕಾಂಪ್ಲೆಕ್ಸ್’ನ ಮೊದಲನೇ ಮಹಡಿಯಲ್ಲಿರುವ ಕಚೇರಿಯನ್ನು ಅಧಿಕಾರಿಗಳು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎನ್’ಐಎ ಅಧಿಕಾರಿಗಳು ಇದೇ ಕಚೇರಿ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಮಹಜರು ನಡೆಸಿದ್ದರು.
ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಕಟ್ಟಡದ ಮಾಲೀಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಯಾವುದೇ ಆಸ್ತಿಯನ್ನು ಕಚೇರಿಯಿಂದ ಸ್ಥಳಾಂತರಿಸುವುದು ಅಥವಾ ನವೀಕರಣ ಕಾರ್ಯ ಕೈಗೊಳ್ಳದಂತೆ ನಿರ್ದೇಶನ ನೀಡಲಾಗಿದೆ.
ಪಿಎಫ್’ಐ ಕಚೇರಿಗೆ ಬೆಂಗಳೂರು ಎನ್’ಐಎ ಬ್ರ್ಯಾಂಚ್’ನ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಅವರ ಸಹಿ ಇರುವ ಎರಡು ಪುಟಗಳ ನೋಟಿಸ್ ಅನ್ನು ಕಚೇರಿಯ ಬಾಗಿಲಿಗೆ ಅಂಟಿಸಲಾಗಿದೆ.