ರಾಕೇಶ್ ಪ್ರಕರಣವನ್ನು ಪ್ರಜ್ವಲ್’ಗೆ ಹೋಲಿಸಬೇಡಿ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ರಾಕೇಶ್ ಸಿದ್ದರಾಮಯ್ಯ ತಪ್ಪು ಮಾಡಿ ವಿದೇಶಕ್ಕೆ ಹೋಗಿರಲಿಲ್ಲ. ರಾಕೇಶ್ ಪ್ರಕರಣವನ್ನು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಹೋಲಿಸಬೇಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

- Advertisement -


ರಾಕೇಶ್ ಸಾವಿನ ಬಗ್ಗೆಯೂ ತನಿಖೆ ನಡೆಸುತ್ತೀರಾ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ಅವರಂತೆ 200-300 ಮಹಿಳೆಯರ ಭವಿಷ್ಯ ಹಾಳು ಮಾಡಿ ವಿದೇಶಕ್ಕೆ ಹೋಗಿರಲಿಲ್ಲ. ರಾಕೇಶ್ ಮತ್ತು ಸ್ನೇಹಿತರು ಕಾನೂನಿನ ಪ್ರಕಾರ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಪದೇ ಪದೇ ರಾಕೇಶ್ ಸಾವಿನ ಪ್ರಕರಣ ಪ್ರಸ್ತಾಪಿಸುವುದು ಸರಿಯಲ್ಲ ಎಂದರು.


ನಿಮ್ಮ ಮನೆ ಮಗ ಎಲ್ಲಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರ ಕೊಡಿ. ಬೇರೆಯವರ ಮನೆ ಮಕ್ಕಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ರಾಕೇಶ್ ಪ್ರಕರಣವನ್ನು ಪ್ರಸ್ತಾಪಿಸುವುದನ್ನು ನಿಲ್ಲಿಸಿ. ಟಿಕೆಟ್ ಕೊಡುವಾಗ, ಮತ ಕೇಳುವಾಗ ಗೊತ್ತಿರಲಿಲ್ಲವೆ? ವದಂತಿಗಳು ಹರಿದಾಡುತ್ತಿದ್ದರೂ ಟಿಕೆಟ್ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.

Join Whatsapp