ಅಯೋಧ್ಯೆಯಲ್ಲಿ ಭೀಕರ ಅಪಘಾತ: ಕಲಬುರಗಿಯ ಮೂವರು ಮೃತ್ಯು

Prasthutha|

ಕಲಬುರಗಿ: ಯಾತ್ರೆಗೆ ತೆರಳಿದ್ದ ವೇಳೆ ಟಿಟಿ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ನಗರದ ಮೂವರು ಮೃತಪಟ್ಟ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.

- Advertisement -

ಮೃತರನ್ನು ಕಲಬುರಗಿಯ ಶಿವರಾಜ್, ಕಾಶಿನಾಥ್ ಮತ್ತು ತಂಗೆಮ್ಮ ಎಂದು ಗುರುತಿಸಲಾಗಿದೆ. ನಗರದ 22 ಜನರು ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು.

ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋದ್ಯೆಗೆ ಹೊರಟಿದ್ದರು. ಈ ವೇಳೆ ಅಯೋದ್ಯೆಯ ಪ್ರಯಾಗ್ ರಾಜ್ ಹೈವೇಯಲ್ಲಿ ಲಾರಿ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Join Whatsapp