IPL-2022; ನೂತನ ಎರಡು ತಂಡಗಳಿಗೆ ನಾಯಕರ ಆಯ್ಕೆ; ಅಧಿಕೃತ ಘೋಷಣೆ

Prasthutha|

ನವದೆಹಲಿ; ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್’ನ ಹೊಸ ಎರಡು ತಂಡಗಳು ನಾಯಕನ ಆಯ್ಕೆಯನ್ನು ಅಧೀಕೃತವಾಗಿ ಘೋಷಿಸಿದೆ.

- Advertisement -


ಲಕ್ನೋ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.


ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್’ನ ಲಕ್ನೋ ಫ್ರಾಂಚೈಸಿಯು ರಾಹುಲ್’ಗೆ 17 ಕೋಟಿ ರೂಪಾಯಿ ಸಂಭಾವನೆ ನೀಡಲಿದೆ. ಹಾರ್ದಿಕ್ ಪಾಂಡ್ಯಗೆ ಅಹಮದಾಬಾದ್ ಫ್ರಾಂಚೈಸಿಯು 15 ಕೋಟಿ ರೂಪಾಯಿ ನೀಡಿದೆ.

- Advertisement -


ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಉಭಯ ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದ್ದು, ಲಕ್ನೋ ತಂಡ ಕೆ.ಎಲ್.ರಾಹುಲ್ ಜೊತೆಗೆ ಆಸ್ಟ್ರೇಲಿಯದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ [9.2 ಕೋಟಿ ರೂಪಾಯಿ]
ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ [4 ಕೋಟಿ ರೂಪಾಯಿ] ಅವರನ್ನು ಆಯ್ಕೆ ಮಾಡಿದೆ.


ಮತ್ತೊಂದೆಡೆ ಅಹಮದಾಬಾದ್ ತಂಡವು ಹಾರ್ದಿಕ್ ಪಾಂಡ್ಯ ಮತ್ತು ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ [ ತಲಾ 15 ಕೋಟಿ ರೂಪಾಯಿ] ಹಾಗೂ ಶುಭಮನ್ ಗಿಲ್’ರನ್ನು [7 ಕೋಟಿ ರೂಪಾಯಿ] ಖರೀದಿಸಿದೆ.
ಉಳಿಸಿಕೊಂಡಿರುವ ಆಟಗಾರರ ಹೊರತುಪಡಿಸಿ ಉಳಿದ ಆಟಗಾರರನ್ನು ಖರೀದಿಸಲು ಮೆಗಾ ಹರಾಜು ಪ್ರಕ್ರಿಯೆಯು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯುವ ನಿರೀಕ್ಷೆ ಇದೆ.


ಫ್ರಾಂಚೈಸಿ ಮಾಲೀಕರ ಜೊತೆ ಬಿಸಿಸಿಐ ಸಭೆ
ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಇಳಿಮುಖ ಕಾಣದ ಹಿನ್ನೆಲೆಯಲ್ಲಿ ಟೂರ್ನಿಯ ಆಯೋಜನೆ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಐಪಿಎಲ್ ಫ್ರಾಂಚೈಸ್ ಮಾಲೀಕರ ಜೊತೆ ವರ್ಚುವಲ್ ಸಭೆಯಲ್ಲಿ ಶನಿವಾರ ಚರ್ಚೆ ನಡೆಸಲಿದ್ದಾರೆ.

Join Whatsapp