ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 53 ಶಿಕ್ಷಕರು ಕೋವಿಡ್ ಗೆ ಬಲಿ

Prasthutha|

ಬೀದರ್: ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುಮಾರು 53 ಶಿಕ್ಷಕರು ಸಾವನ್ನಪ್ಪಿದ್ದಾರೆ.

- Advertisement -

ಏಪ್ರಿಲ್ 17 ರಂದು ಬಸವಕಲ್ಯಾಣ ಉಪ ಚುನಾವಣೆ ಮತ್ತು ಏಪ್ರಿಲ್ 27 ರಂದು ಬೀದರ್ ನಗರ ಸಭೆ ಚುನಾವಣೆಗಾಗಿ ಶಿಕ್ಷಕರನ್ನು ನೇಮಿಸಲಾಗಿತ್ತು.

ಡಿಡಿಪಿಐ ಗಂಗಣ್ಣ ಸ್ವಾಮಿ ಸೇರಿದಂತೆ ಜಿಲ್ಲೆಯ 1,500 ಸಿಬ್ಬಂದಿಗಳಲ್ಲಿ 200 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಅದರಲ್ಲಿ 53 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಟಿ.ಆರ್ ದೊಡ್ಡೆ ತಿಳಿಸಿದ್ದಾರೆ.

- Advertisement -

ಮತದಾನದ ಕೆಲಸಕ್ಕೆ ನಿಯೋಜಿಸಲ್ಪಟ್ಟ ಎಲ್ಲ ಶಿಕ್ಷಕರಿಗೆ ವೈರಸ್‌ ತಗುಲಿದೆ ಮತ್ತು ಕೋವಿಡ್‌ನಿಂದ ಸಾವನ್ನಪ್ಪಿದ ಎಲ್ಲ ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿದ್ದರು ಎಂದು ನಾವು ಹೇಳಲಾಗುವುದಿಲ್ಲ. ಅವರಲ್ಲಿ ಹೆಚ್ಚಿನವರು ಮತದಾನದ ಕರ್ತವ್ಯದಲ್ಲಿದ್ದರು ಎಂಬುದು ನಿಜ ಎಂದು ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನಲ್ಲಿ ಮಾತ್ರ ಕೋವಿಡ್‌ನಿಂದಾಗಿ 16 ಶಿಕ್ಷಕರು ಸಾವನ್ನಪ್ಪಿದ್ದಾರೆ. ಆದರೆ, ಅವರನ್ನು ಮತದಾನದ ಕರ್ತವ್ಯಕ್ಕೆ ನಿಯೋಜಿಸಿರಲಿಲ್ಲ. ಸಾವನ್ನಪ್ಪಿದ 53 ಉದ್ಯೋಗಿಗಳಲ್ಲಿ 46 ಶಿಕ್ಷಕರು ಮತ್ತು 7 ಮಂದಿ ಬೋಧಕೇತರ ಸಿಬ್ಬಂದಿ ಸೇರಿದ್ದಾರೆ.

ಬೀದರ್ ತಾಲೂಕಿನಿಂದ 18, 16 ಮಂದಿ ಬಸವಕಲ್ಯಾಣ ತಾಲೂಕಿನಿಂದ, ಮತ್ತು ಭಾಲ್ಕಿ ಮತ್ತು ಔರಾದ್ ತಾಲೂಕಿನಿಂದ ತಲಾ ಏಳು ಮಂದಿ ಮತ್ತು ಹುಮ್ನಾಬಾದ್ ತಾಲ್ಲೂಕಿನ ಐವರು ನೌಕರರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ 130  ಶಿಕ್ಷಕರು  ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ 147 ಸಿಬ್ಬಂದಿ  ಕೋವಿಡ್ ಗೆ ಬಲಿಯಾಗಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿದವರ ಅಂತಿಮ ಸಂಸ್ಕಾರಕ್ಕೆ ಇಲಾಖೆ ಹಣ ನೀಡುತ್ತಿದೆ.

Join Whatsapp