May 17, 2021

ಬಿಜೆಪಿ ನನ್ನ ಮೇಲೆಯೇ ದೇಶದ್ರೋಹ ಪ್ರಕರಣ ದಾಖಲಿಸಬಹುದು: ಉತ್ತರ ಪ್ರದೇಶ ಸರಕಾರದ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

ಲಕ್ನೋ: ಉತ್ತರಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಸ್ವಪಕ್ಷದ ಶಾಸಕ ರಾಕೇಶ್‌ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಮಾಧ್ಯಮಗಳೊಂದಿಗೆ ಮಾತನಾಡಿದ್ದಲ್ಲಿ ನನ್ನ ವಿರುದ್ಧ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

“ನಾನು ಹಲವಾರು ಕೆಲಸ  ಕಾರ್ಯಗಳನ್ನು ಕೈಗೊಂಡಿದ್ದೇನೆ. ಆದರೆ ಶಾಸಕರ ಕುರಿತು ಇಲ್ಲಿ ಯಾವ ನಿಲುವಿದೆ? ನಾನೇದಾರೂ ಹೆಚ್ಚು ಮಾತನಾಡಿದರೆ ನನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬಹುದು” ಎಂದು ಸೀತಾಫುರ ಪಟ್ಟಣದಲ್ಲಿ ಸರಕಾರಿ ಆರೋಗ್ಯ ಕೇಂದ್ರವನ್ನು ಮರು ಕಾರ್ಯಗತಗೊಳಿಸುವ ಕುರಿತು ಅವರನ್ನು ಪ್ರಶ್ನಿಸಿದಾಗ ಅವರು ಉತ್ತರ ನೀಡಿದರು.

ನಿಮ್ಮದೆ ಸರಕಾರ ಇರುವಾಗ, ಅದೇ ಸರಕಾರವನ್ನು ನೀವು ಪ್ರತಿನಿಧಿಸಿ ನಿಮಗೆ ನಿರ್ಧಾರಗಳನ್ನು ಕೈಗೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದಾಗ, “ಇಲ್ಲಿ ಶಾಸಕರು ತಮ್ಮ ಮನದಲ್ಲಿದುದನ್ನು ಬಹಿರಂಗವಾಗಿ ಹೇಳಬಹುದು ಎಂದು ನಿಮಗನಿಸುತ್ತಿದೆಯೇ? ನಾನು ಈ ಕುರಿತು ಈ ಹಿಂದೆಯೂ ಪ್ರಶ್ನಿಸಿದ್ದೆ ಎಂಬುವುದು ನಿಮಗೆ ತಿಳಿದಿದೆಯಲ್ಲವೇ” ಎಂದು ಅವರು ಉತ್ತರಿಸಿದ್ದಾರೆ.

ಮೊದಲ ಬಾರಿ ಶಾಸಕರಾಗಿರುವ ರಾಥೋಡ್‌ 2017ರ ಚುನಾವಣೆಗೂ ಮುಂಚೆ ಬಿಜೆಪಿ ಸೇರಿದ್ದರು. ಈ ಹಿಂದೆ ಸ್ವತಂತ್ರಾಗಿ ಅವರು ಚುನಾವಣೆಗೆ ಸ್ಫರ್ಧಿಸಿದ್ದು, ಮಾಯಾವತಿಯ ಬಹುಜನ ಸಮಾಜ ಪಕ್ಷದಲ್ಲೂ ಅವರು ನಂಟು ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಹಿಂದೆ ಪ್ರಧಾನಿ ಮೋದಿಯ ಕುರಿತು ಟೀಕಿಸಿದ್ದಕ್ಕೆ ಬಿಜೆಪಿ ಅವರಿಂದ ಸ್ಪಷ್ಟನೆ ಕೋರಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!