ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ದಾಳಿ: 46 ಫೆಲೆಸ್ತೀನಿಯನ್ನರಿಗೆ ಗಂಭೀರ ಗಾಯ

Prasthutha|

ಗಾಝಾ: ವೆಸ್ಟ್ ಬ್ಯಾಂಕ್ ನ ರಮಲ್ಲಾಹ್ ನಗರ ಸುತ್ತಮುತ್ತಲ ಪ್ರದೇಶದಲ್ಲಿ ಇಸ್ರೇಲ್ ದಾಳಿ ನಡೆಸಿದೆ. ಸೈನಿಕರೊಂದಿಗೆ ಶುಕ್ರವಾರ ನಡೆದ ಘರ್ಷಣೆಯಲ್ಲಿ 46 ಮಂದಿ ಫೆಲೆಸ್ತೀನಿಯನ್ನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಇಸ್ರೇಲ್ ಸೈನಿಕರು ಸಿಡಿಸಿದ ಅಶ್ರುವಾಯುವಿನಿಂದಾಗಿ 26 ಕ್ಕೂ ಅಧಿಕ ಫೆಲೆಸ್ತೀನ್ನರು ಉಸಿರಾಟದ ಸಮಸ್ಯೆ ಎದುರಿಸಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ರಬ್ಬರ್ ಗುಂಡಿನಿಂದಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಮೂಲದ ವಸಾಹತುಷಾಹಿಗಳು ಫೆಲೆಸ್ತೀನ್ ಅನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದಿವೆ.

Join Whatsapp