ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ 2ನೆ ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

Prasthutha|

ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಯ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ 2ನೆ ವಾರ್ಷಿಕೋತ್ಸವ ಸಮಾರಂಭವು ಶಾರದಾ ಶಾಲಾ ಮೈದಾನದಲ್ಲಿ ನಡೆಯಿತು.

- Advertisement -

 ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು. ಸುಲ್ತಾನ್ ಬಿಲ್ಡರ್ಸ್ & ಡೆವಲಪರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಜನಾಬ್ ಯು. ಬಿ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ತುಂಬೆ ಶುಭ ಹಾರೈಸಿದರು.

ಇದೇ ವೇಳೆ ರಫೀಕ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಬ್ಯಾರಿ ಸಂಗೀತ ಕಲಾವಿದರಿಗೆ ಕ್ರಿಕೆಟ್ ಪಂದ್ಯಾಟ, ವಿಕಲ ಚೇತನರಿಗೆ ವಿಲ್ ಚೆರ್ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಅರ್ಹ ಕಲಾವಿದರಿಗೆ ಧನ ಸಹಾಯ ವಿತರಿಸಲಾಯಿತು.

- Advertisement -

ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ಪಟ್ಟವನ್ನು ಎರಡನೇ ಬಾರಿಗೆ ರಾಝ್ ಕಲಾಯಿ ನೇತೃತ್ವದ ಬ್ಯಾರಿ ಸ್ಟಾರ್ ತಂಡವು ಪಡೆಯಿತು. ಸಿನಾನ್ ಚಿನ್ನು ನೇತೃತ್ವದ ಕಿಂಗ್ಸ್ ತಂಡವು ರನ್ನರ್ ಅಪ್ ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ಕಡೆಯಿಂದ, ಹಿರಿಯ ಕವಿ ಸಾಹಿತಿ ಹುಸೈನ್ ಕಾಟಿಪಳ್ಳ, ಬಶೀರ್ ಕಿನ್ಯ, ಅಶ್ರಫ್ ಅಪೋಲೋ, ರಶೀದ್ ನಂದಾವರ, ಯಾಸಿರ್ ಯಾಚಿ ಮತ್ತು ಸಫ್ವಾನ್ ಪತ್ತುಂಜಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನ್ಯೂ ಸ್ಮಾರ್ಟ್ ಎಲೆಕ್ಟ್ರಿಕಲ್ ಮಾಲಕ ಜನಾಬ್ ಅಬ್ದುಲ್ ಸಮದ್ ಸಾಮಣಿಗೆ ಆಗಮಿಸಿದ್ದರು. ಸಮಾರೋಪ ಸಮಾರಂಭದಲ್ಲಿ  ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಸ್ಥಾಪಕ ಅಧ್ಯಕ್ಷರಾದ ಶಮೀರ್ ಮುಲ್ಕಿ ಮತ್ತು ಪ್ರಧಾನ ಕಾರ್ಯದರ್ಶಿ ಸರ್ಫಾರಾಝ್ ಮಂಗಳೂರು, ಆಲಾಡಿ, ಜೊತೆ ಕಾರ್ಯದರ್ಶಿ ಸಿದ್ದಿಕ್ ಪಂಡಾಕಾರಕಲ್ಲು ಮತ್ತು ಕೋಶಾಧಿಕಾರಿ ರಾಝ್ ಕಲಾಯಿ ಮತ್ತು ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಮತ್ತು ಕಲಾವಿದರಿಗಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Join Whatsapp