ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತೀಯ ವನಿತೆಯರಿಗೆ ಸೋಲು

Prasthutha|

ನ್ಯೂಝಿಲೆಂಡ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತೀಯ ವನಿತೆಯರು ಸೋಲನುಭವಿಸಿದ್ದಾರೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಭಾರತದ ಮತ್ತು ಆಸ್ಟ್ರೇಲಿಯ ಪಂದ್ಯದಲ್ಲಿ ಆಸ್ಟ್ರೇಲಿಯ ಆರು ವಿಕೆಟ್‌ ಗಳ ಅಂತರದಿಂದ ಜಯಭಾರಿಸಿದೆ.

- Advertisement -

ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 277 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಆಸ್ಟ್ರೇಲಿಯಾ ಪರ ನಾಯಕಿ ಮೆಗ್ ಲ್ಯಾನಿಂಗ್ 97, ಅಲೈಸಾ ಹೀಲಿ 72 ರನ್‌ ಗಳಿಸಿದರು. ಭಾರತದ ಪರ ಪೂಜಾ ವಸ್ತ್ರಕರ್ 2, ಮೇಘನಾ ಸಿಂಗ್ ಹಾಗೂ ಸ್ನೇಹಾ ರಾಣಾ ತಲಾ ಒಂದು ವಿಕೆಟ್ ಪಡೆದರು.

Join Whatsapp