ಮಮತಾ ಕೌಟುಂಬಿಕ ಹಿನ್ನೆಲೆ ಬಗ್ಗೆ ಅವಹೇಳನಕಾರಿ ಹೇಳಿಕೆ: ದಿಲೀಪ್ ಘೋಷ್ ವಿರುದ್ಧ FIR

Prasthutha|

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೌಟುಂಬಿಕ ಹಿನ್ನೆಲೆ ಅಣಕಿಸಿದ್ದಾರೆ ಎನ್ನುವ ಆರೋಪದ ಮೇಲೆ ಬಿಜೆಪಿ ನಾಯಕ ದಿಲೀಪ್ ಘೋಷ್ ವಿರುದ್ಧ ದುರ್ಗಾಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ದುರ್ಗಾಪುರ ನ್ಯಾಯಾಲಯದ ವಕೀಲ ಮತ್ತು ಇನ್ನೊಬ್ಬ ವ್ಯಕ್ತಿ ದೂರು ನೀಡಿದ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಐಪಿಸಿ ಸೆಕ್ಷನ್ 504ರ ಅಡಿ (ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಅವಮಾನ) ಹಾಗೂ ಐಪಿಸಿ ಸೆಕ್ಷನ್ 509ರ ಅಡಿ (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ ಬಳಕೆ) ಎಫ್ಐಆರ್ ದಾಖಲಿಸಲಾಗಿದೆ.

Join Whatsapp