ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತೆ 4 ದಿನ ಇಡಿ ಕಸ್ಟಡಿಗೆ

Prasthutha|

ದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಈಡಿ ಕಸ್ಟಡಿ ಅವಧಿಯನ್ನು ಎ.1 ರವೆರೆಗೆ ದಿಲ್ಲಿ ನ್ಯಾಯಾಲಯ ವಿಸ್ತರಿಸಿದೆ.

- Advertisement -


ಇಂದು ರೋಸ್ ಅವೆನ್ಯೂ ಕೋರ್ಟ್ ಗೆ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕೆರದುಕೊಂಡು ಬರಲಾಗಿತ್ತು. ಇದೀಗ ಮತ್ತೆ 4 ದಿನ ಇಡಿ ಕಸ್ಟಡಿ ವಿಸ್ತರಣೆಯನ್ನು ಮಾಡಲಾಗಿದೆ ಎಂದು ದೆಹಲಿ ಕೋರ್ಟ್ ಆದೇಶ ನೀಡಿದೆ. ಏಪ್ರಿಲ್ 1ರವರೆಗೆ ಇಡಿ ಕಸ್ಟಡಿ ಅವಧಿ ವಿಸ್ತರಣೆ ಮಾಡಲಾಗಿದೆ. ಇಡಿ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.



Join Whatsapp