ಲಲಿತಪುರ: ತಂದೆಯೊಬ್ಬ ಹೆತ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಬಳಿಕ ವೇಶ್ಯಾವಾಟಿಕೆಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ.
ಕಳೆದ ಕೆಲ ವರ್ಷಗಳಿಂದ ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ಹಾಗೂ ಬೆದರಿಕೆ ಹಾಕುವ ಮೂಲಕ ಪಾಪಿ ತಂದೆ ಖುದ್ದಾಗಿ ಈ ಕೆಲಸ ಮಾಡಿಸಿದ್ದಾನೆ.
ಈ ಬಗ್ಗೆ ಬಾಲಕಿ ತನ್ನ ತಾಯಿಯೊಡನೆ ಹೇಳಿದ್ದು, ತನ್ನ ತಾಯಿಯ ಸಹಾಯದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಸೇರಿದಂತೆ 28 ಮಂದಿ ವಿರುದ್ಧ ದೂರು ದಾಖಲಾಗಿದೆ.