ಆಯುಧ ಪೂಜೆಯ ದಿನದಂದು ಸರ್ಕಾರಿ ಬಸ್ಸುಗಳನ್ನು ಪೂಜಿಸಿ: ಬಿ. ಶ್ರೀರಾಮುಲು ತಾಕೀತು

Prasthutha|

ಬೆಂಗಳೂರು:  ಆಯುಧ ಪೂಜೆಯ ದಿನದಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಎಲ್ಲಾ  ಪ್ರಯಾಣಿಕ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸಬೇಕು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

- Advertisement -

ಪೂಜೆಗೆ ನೆರವಾಗುವಂತೆ ಪ್ರತಿ ವಾಹನಕ್ಕೆ 100 ರೂ ಮತ್ತು ಪ್ರತಿ  ವಿಭಾಗೀಯ ಕಾರ್ಯಾಗಾರಕ್ಕೆ 1000 ರೂ ಮುಂಗಡ ನಗದು  ಪಡೆದು  ಈ ಪೂಜಾ ಕಾರ್ಯಕ್ಕೆ ಎಂದಿನಂತೆ  ವಿನಿಯೋಗಿಸಿ, ಆಚರಿಸಬೇಕು ಎಂದು ತಿಳಿಸಿದ  ಶ್ರೀರಾಮುಲು, ರಾಜ್ಯದ ಸಮಸ್ತ ಜನತೆಗೆ,  ಕರ್ನಾಟಕ ರಾಜ್ಯ  ರಸ್ತೆ ಸಾರಿಗೆ ಸಂಸ್ಥೆಯ    ಸಮಸ್ತ ನೌಕರರಿಗೆ , ಅಧಿಕಾರಿಗಳಿಗೆ  ದಸರಾ ನಾಡಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಗಿರಣ  ಮೂಡಲಿ ಎಂದು ಸಚಿವರು ಹಾರೈಸಿದ್ದಾರೆ.

Join Whatsapp