ಮಕ್ಕಳ ಜನ್ಮದಿನಕ್ಕೆ ದಂಪತಿ ಖರ್ಚು ಮಾಡಿದ್ದೆಷ್ಟು?

Prasthutha|

- Advertisement -

ಬ್ರಿಟನ್​ ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್​​ಫೋರ್ಡ್​ ಹಾಗೂ ಆಕೆಯ ಪತಿ ನ್ಯೋಲ್​ ರಾಡ್​ಫೋರ್ಡ್​ ದಂಪತಿ ಕೇವಲ ತಮ್ಮ ಮಕ್ಕಳ ಹುಟ್ಟುಹಬ್ಬದ ಉಡುಗೊರೆಗೆಂದೇ ಈವರೆಗೆ ಬರೋಬ್ಬರಿ 70 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ದಂಪತಿ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ.

ಮನೆ ತುಂಬಾ ಮಕ್ಕಳನ್ನ ಹೊಂದಿರುವ ಈ ಕುಟುಂಬವು ಸದಾ ಗಿಜಿಗುಡುತ್ತಲೇ ಇರುತ್ತದೆ. ಈ ದಂಪತಿಯು ಬೇಕರಿಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದೆ. ಸ್ಯೂ ತನ್ನ ಜೀವನದ 800 ವಾರಗಳನ್ನ ಗರ್ಭಿಣಿಯಾಗಿ ಕಳೆದಿದ್ದಾಳೆ.

- Advertisement -

ಕ್ರಿಸ್​, ಸೋಫಿ, ಚ್ಲೋ, ಜಾಕ್​, ಡೇನಿಯಲ್, ಲ್ಯೂಕ್​, ಮಿಲ್ಲೆ, ಕೇಟಿ, ಕೇಮ್ಸ್, ಎಲ್ಲೆ, ಏಮಿ, ಜೋಶ್​, ಮ್ಯಾಕ್ಸ್, ಆಸ್ಕರ್​, ಕಾಸ್ಪರ್​, ಹ್ಯಾಲೆ, ಫೋಬೆ ಹಾಗೂ ಆರ್ಕೆ ಇವರ ಮಕ್ಕಳ ಹೆಸರಾಗಿದೆ. ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಿನಲ್ಲಿ ಸ್ಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಮನೆಯ ಹೊಸ ಸದಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಈ ಕುಟುಂಬದ ಬಗ್ಗೆ ಹೆಚ್ಚೇನು ಮಾಹಿತಿ ತಿಳಿದಿರಲಿಲ್ಲ. ಆದರೆ ಈಗ ಈ ಫ್ಯಾಮಿಲಿಯ ಬಗ್ಗೆ ಒಂದು ಕಾರ್ಯಕ್ರಮವೇ ಪ್ರದರ್ಶಿತವಾಗಿದೆ.

ಚಾನೆಲ್​ 5ನ ಹೊಸ ಶೋ ಒಂದರಲ್ಲಿ ರಾಡ್​ಫೋರ್ಡ್ಸ್​ ತಮ್ಮ ದೈನಂದಿನ ಖರ್ಚನ್ನ ಹೇಗೆ ನಿಭಾಯಿಸ್ತಾರೆ ಹಾಗೂ ಲಾಕ್​ಡೌನ್​ ಸಂದರ್ಭದಲ್ಲಿ ಈ ಕುಟುಂಬ ಜೀವನ ನಿರ್ವಹಣೆಗೆ ಎಷ್ಟು ಕಷ್ಟಪಟ್ಟಿದೆ ಅನ್ನೋದರ ಬಗ್ಗೆ ವಿವರಣೆ ನೀಡಿದೆ.

22 ಮಕ್ಕಳಿಗೆ ಹೊಟ್ಟೆ ತುಂಬಿಸೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಈ ಕುಟುಂಬವು ದಿನಕ್ಕೆ 7.5 ಲೀಟರ್ ಹಾಲನ್ನು ಬಳಕೆ ಮಾಡುತ್ತದೆ. ಇವರ ಮನೆಯಲ್ಲಿ ದಿನಕ್ಕೆ 34 ಟಾಯ್ಲೆಟ್​ ಪೇಪರ್​ಗಳು ಖಾಲಿಯಾಗುತ್ತವೆ.

ನಮ್ಮ ಮನೆಯಲ್ಲಿ ವರ್ಷಪೂರ್ತಿ ಬರ್ತಡೇ ಆಚರಣೆ ನಡೆಯುತ್ತಲೇ ಇರುತ್ತೆ. ಆದರೆ ನಾವೆಂದೂ ಮಕ್ಕಳ ದಿನವನ್ನು ವಿಶೇಷವಾಗಿಯೇ ಆಚರಿಸಿದ್ದೇವೆ ಎಂದು ಸ್ಯೂ ಹೇಳಿದ್ದಾರೆ.

Join Whatsapp