ಆ ಮನೆಯಲ್ಲಿ ನನ್ನ ಮಾನಭಂಗವಾಗಿದೆ, ನಾನು ಪಾಲಿಗ್ರಾಫ್ ಪರೀಕ್ಷೆಗೆ ಸಿದ್ಧ: ಸ್ವಾತಿ ಮಲಿವಾಲ್

Prasthutha|

ನವದೆಹಲಿ: ಆ ಮನೆಯಲ್ಲಿ ನನ್ನ ಮಾನಭಂಗ ನಡೆದಿದೆ, ಚಾರಿತ್ರ್ಯ ವಧೆಯಾಗಿದೆ, ಎಫ್ಐಆರ್ನಲ್ಲಿ ತಾನು ಹೇಳಿರುವುದು ನಿಜ ಎಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

- Advertisement -


ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಆಪ್ತ ಕಾಯದರ್ಶಿ ವಿಭವ್ ಕುಮಾರ್ ತಮ್ಮ ಮೇಲೆ ನಡೆಸಿದ ಹಲ್ಲೆ ಕುರಿತು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ನಾರ್ಕೋ ಪರೀಕ್ಷೆ ಮತ್ತು ಪಾಲಿಗ್ರಾಫ್ಗೆ ಒಳಗಾಗಲು ಸಿದ್ಧ ಎಂದು ಅವರು ಹೇಳಿದ್ದಾರೆ.


ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರಿಗೆ ನನ್ನ ರಾಜ್ಯಸಭಾ ಸ್ಥಾನ ಬೇಕಿದ್ದರೆ ಪ್ರೀತಿಯಿಂದ ಕೇಳಿದ್ದರೆ ನನ್ನ ಪ್ರಾಣವನ್ನು ಬೇಕಿದ್ದರೂ ಬಿಡುತ್ತಿದ್ದೆ, ಸಂಸದೆ ಎಂಬುದು ಸಣ್ಣ ವಿಷಯ, ಆದರೆ ಈಗ ನನ್ನ ಮೇಲೆ ಹಲ್ಲೆ ನಡೆದಿದೆ, ಪ್ರಪಂಚದ ಯಾವೊಂದು ಶಕ್ತಿ ಬಂದು ಹೇಳಿದರೂ ನಾನು ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ.

Join Whatsapp