ಅಪ್ಪನ ಬಗ್ಗೆ ಆಶ್ಲೀಲವಾಗಿ ನಿಂದಿಸುತ್ತಿರುವ ನಿಮಗೆಲ್ಲರಿಗೆ ಧನ್ಯವಾದ: ದರ್ಶನ್ ಪುತ್ರನ ಪೋಸ್ಟ್

Prasthutha|

ಮೈಸೂರು: ಕನ್ನಡದ ಸ್ಟಾರ್ ನಟನಾಗಿ, ಇತ್ತೀಚೆಗಿನ ಕಾಟೇರ ಚಿತ್ರದ ಯಶಸ್ಸಿನಿಂದ ಮತ್ತಷ್ಟು ಜನಪ್ರಿಯಗೊಂಡ ದರ್ಶನ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಚಾರ ಕನ್ನಡ ಸಿನೆಮಾ ಇಂಡಸ್ಟ್ರಿಗೆ ಮಾತ್ರವಲ್ಲ, ಅವರ ಕುಟುಂಬದ ಮೇಲೆಯೂ ಕರಿನೆರಳಿನಂತೆ ಪರಿಣಾಮ ಬೀರಿದೆ. ಪತ್ನಿ ವಿಜಯಲಕ್ಷ್ಮೀ ಸೋಶಿಯಲ್‌ ಮೀಡಿಯಾದಿಂದಲೇ ದೂರವಾಗಿದ್ದಾರೆ. ಇದೀಗ ನಟ ದರ್ಶನ್‌ ಹೆಚ್ಚಾಗಿ ಪ್ರೀತಿ ಮಾಡುವ ಮಗ ವಿನೀಶ್‌ ತೂಗುದೀಪ ತಂದೆಯ ಬಂಧನ ಮತ್ತು ಬಳಿಕದ ತಂದೆಯ ಇಮೇಜ್ ಇಳಿಯುತ್ತಿರುವುದರ ಬಗ್ಗೆ ತೀರಾ ಬೇಸರದಲ್ಲಿ ಪೋಸ್ಟ್‌ ಮಾಡಿದ್ದಾರೆ.

- Advertisement -

ನನ್ನ ಅಪ್ಪನ ಬಗ್ಗೆ ಕೆಟ್ಟ ಹಾಗೂ ಆಶ್ಲೀಲ ಭಾಷೆಯಲ್ಲಿ ಕಮೆಂಟ್‌ ಮಾಡಿ ನಿಂದಿಸುತ್ತಿರುವ ನಿಮಗೆಲ್ಲರಿಗೆ ಧನ್ಯವಾದ. ನಾನು 15 ವರ್ಷದ ಬಾಲಕನಾಗಿರಬಹುದು ಆದರೆ ನನಗೂ ಭಾವನೆಗಳಿವೆ ಎನ್ನುವುದನ್ನು ನೀವೆಲ್ಲ ಪರಿಗಣಿಸಲೇ ಇಲ್ಲ. ಇಂಥ ಕಷ್ಟದ ಸಮಯದಲ್ಲಿ ನನ್ನ ತಂದೆ -ತಾಯಿಗೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ. ನೀವು ನನಗೆ ನಿಂದಿಸಿ ಕಮೆಂಟ್‌ ಮಾಡುವುದರಿಂದ ಯಾವುದೇ ಬದಲಾವಣೆ ಆಗಲು ಸಾಧ್ಯವಿಲ್ಲ ಎಂದು ನಟ ದರ್ಶನ್ ಪುತ್ರ ದುಃಖದಲ್ಲಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೊಲೆ ಘಟನೆ ಬೆಳಕಿಗೆ ಬಂದ ಬಳಿಕ ದರ್ಶನ್‌ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಚಿತ್ರರಂಗದಿಂದ ಮೇಲೆ ದರ್ಶನ್‌ ಅವರನ್ನು ಬ್ಯಾನ್‌ ಮಾಡಬೇಕೆನ್ನುವ ಒತ್ತಡ ಕೂಡ ಕೇಳಿಬಂದಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ಫಿಲ್ಮ್‌ ಚೇಂಬರ್‌ ಹೇಳಿದ್ದೂ ನಡೆದಿದೆ.

Join Whatsapp