ಅಕಾಶದಲ್ಲಿ ನಿಗೂಢ ಬೆಳಕಿನ ಗೆರೆ ಗೋಚರ!

Prasthutha|

ಚಂಡೀಗಡ: ಆಕಾಶದಲ್ಲಿ ನಿಗೂಢ ಬೆಳಕಿನ ಗೆರೆಯೊಂದು ಪಂಜಾಬ್‌ನ ಪಠಾಣ್‌ ಕೋಟ್‌ ನ ನಿವಾಸಿಗಳಿಗೆ ಗೋಚರಿಸಿದೆ. ಕೆಲವು ನಿಮಿಷಗಳ ಕಾಲ ಮಿನುಗಿದ ಬೆಳಕಿನ ಗೆರೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

- Advertisement -

‘ಪ್ರಕಾಶಮಾನ ಬೆಳಕಿನೊಂದಿಗೆ ವಸ್ತುವೊಂದು ವೇಗವಾಗಿ ಸಂಚರಿಸುವುದನ್ನು ನೋಡಿದೆವು. ದೂರದಲ್ಲಿ ರೈಲು ಹೋಗುತ್ತಿರುವಂತೆ ಭಾಸವಾಯಿತು. ಬೆಳಕು ತುಂಬ ಪ್ರಕಾಶಮಾನವಾಗಿತ್ತು ಮತ್ತು ಬಿಳಿಯಾಗಿತ್ತು. ಇದೇ ಮೊದಲ ಬಾರಿಗೆ ನಾವು ಇಂತಹದ್ದೊಂದು ವಿಸ್ಮಯವನ್ನು ನೋಡಿದೆವು. ಪೂರ್ಣ 5 ನಿಮಿಷಗಳ ವರೆಗೆ ನಮಗೆ ಈ ದೃಶ್ಯ ಕಾಣಿಸಿತು, ನಂತರ ಮಾಯವಾಯಿತು’ ಎಂದು ಪಠಾಣ್‌ಕೋಟ್‌ನ ನಿವಾಸಿಯೊಬ್ಬರು ತಿಳಿಸಿದ್ದಾರೆ.

ನಿಗೂಢ ಬೆಳಕಿನ ಗೆರೆಯ ದೃಶ್ಯವನ್ನು ಚಿತ್ರೀಕರಿಸಿದ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ.

Join Whatsapp