ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ರೂ. 1 ಲಕ್ಷ ನೆರವು: ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಘೋಷಣೆ

Prasthutha|

ತೆಲಂಗಾಣ: ರಾಜ್ಯದಲ್ಲಿ ಸುರಿದ ವಿಪರೀತ ಮಳೆಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ತಲಾ ರೂ. 1 ಲಕ್ಷ ನೆರವು ನೀಡಲಾಗುವುದು ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ.

- Advertisement -

ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಳೆಯಿಂದ ಭಾಗಶಃ ಹಾನಿಗೊಳಗಾದ ಮನೆಗಳಿಗೆ  50,000 ನೆರವು ನೀಡಲಾಗುವುದು. ತಗ್ಗು ಪ್ರದೇಶಗಳಲ್ಲಿನ ಪ್ರತಿ ಪೀಡಿತ ಬಡ ಕುಟುಂಬಗಳಿಗೆ ರೂ. 10,000 ಆರ್ಥಿಕ ಸಹಾಯವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ 100 ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ಇಂತಹ ಭಾರಿ ಮಳೆಯಾಗಲಿಲ್ಲ ಎಂದು ಕೆಸಿಆರ್ ಹೇಳಿದರು. ಪ್ರಾಥಮಿಕ ಅಂದಾಜಿನ ಪ್ರಕಾರ, ಭಾರೀ ಮಳೆಯಿಂದಾಗಿ ಒಟ್ಟು 5,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ತೆಲಂಗಾಣ ಸರ್ಕಾರವು ಕೇಂದ್ರದಿಂದ 1,380 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲು ಕೋರಿದೆ. ಆದರೆ, ಇದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Join Whatsapp