ಫಾರೂಕ್ ಅಬ್ದುಲ್ಲಾರ ವಯಸ್ಸನ್ನೂ ನೋಡದೆ 5 ಗಂಟೆ ಇಡಿ ಕಚೇರಿಯಲ್ಲಿ ಇರಿಸಲಾಯಿತು: ಕೇಂದ್ರ ಸರಕಾರವನ್ನು ಟೀಕಿಸಿದ ಪೀಪಲ್ಸ್ ಅಲೈಯನ್ಸ್

Prasthutha|

ದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ನ್ಯಾಷನಲ್ ಕಾನ್ಫರೆನ್ಸ್‌ನ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ಕರೆಸಿಕೊಂಡು 5 ಗಂಟೆ ಇಡಿ ಕಚೇರಿಯಲ್ಲಿ ಇರಿಸಿ, ಅವರ ವಯಸ್ಸನ್ನೂ ಪರಿಗಣಿಸದೆ ಮಾನಸಿಕ ಹಿಂಸೆ ನೀಡಿರೋದಾಗಿ ಹೊಸದಾಗಿ ರಚನೆಗೊಂಡ ಪೀಪಲ್ಸ್ ಅಲೈಯನ್ಸ್  ಆರೋಪಿಸಿದೆ.

ಕಳೆದ ಅಕ್ಟೋಬರ್ 15 ರಂದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಒಂದುಗೂಡಿ  ಪೀಪಲ್ಸ್ ಅಲೈಯನ್ಸ್ ರಚನೆ ಮಾಡಿರುವುದಾಗಿ ಘೋಷಣೆ ಮಾಡಿದ್ದರು. ಇದು ಘೋಷಣೆಯಾದ ಒಂದು ದಿನದ ನಂತರ  ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ನಲ್ಲಿ ನಡೆದ ಕೋಟ್ಯಂತರ ಹಗರಣಕ್ಕೆ ಸಂಬಂಧಿಸಿ ಫಾರೂಕ್ ಅಬ್ದುಲ್ಲಾ ರವರು ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿದ್ದರು.  

- Advertisement -