ಪ್ರಬಲ ಮುಸ್ಲಿಮ್ ಧ್ವನಿಗಳೆಂದರೆ ಬಿಜೆಪಿಗೆ ಅಲರ್ಜಿ : ಬಿಹಾರದ ಕಾಂಗ್ರೆಸ್ ಅಭ್ಯರ್ಥಿ ಮಸ್ಕೂರ್ ಉಸ್ಮಾನಿ

Prasthutha|

► ಬಿಜೆಪಿಯಿಂದ ಕೀಳು ಮಟ್ಟದ ‘ಜಿನ್ನಾ ವಿವಾದ’

- Advertisement -

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯುವ ಮುಸ್ಲಿಮ್ ಸಾಮಾಜಿಕ ಕಾರ್ಯಕರ್ತ ಮಸ್ಕೂರ್ ಉಸ್ಮಾನಿ ಬಿಜೆಪಿಯ ಟ್ರೋಲ್ ಪಡೆಗಳಿಂದ ನಿರಂತರವಾಗಿ ದಾಳಿಗೊಳಗಾಗುತ್ತಿದ್ದಾರೆ. ಗೆಲುವಿಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಾಗಿರುವ ಬಿಜೆಪಿಗರ ಪಡೆ, ಉಸ್ಮಾನಿಯನ್ನು ಜಿನ್ನಾರ ಬೆಂಬಲಿಗ ಎಂದು ಕರೆಯುತ್ತಿದ್ದಾರೆ.

ಬಿಹಾರ ಮತ್ತು ಪಕ್ಷದ ಹೊ ರಾಜ್ಯಗಳ ಬಿಜೆಪಿ ನಾಯಕರು,  ದರ್ಭಾಂಗ್ ಜಿಲ್ಲೆಯ ಝಾಲೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಸ್ಕೂರ್ ಉಸ್ಮಾನಿ ಅವರು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಸಿದ್ಧಾಂತವನ್ನು ಬೆಂಬಲಿಸದ್ದಾರೆ ಎನ್ನುವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಇದು ಸ್ಪಷ್ಟವಾಗಿ ಚುನಾವಣೆಯಲ್ಲಿ ಅವರನ್ನು ಎದುರಿಸಲಾಗದ ಬಿಜೆಪಿಯ ಎಂದಿನ ಕೆಟ್ಟ ತಂತ್ರ ಎಂದೇ ವ್ಯಾಖ್ಯಾನಿಸಲಾಗಿದೆ.

- Advertisement -

26 ವರ್ಷದ ಉಸ್ಮಾನಿ 2017-18ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಇದೇ ವೇಳೆಯಲ್ಲಿ 1938ರಿಂದ ಎಎಂಯು ವಿದ್ಯಾರ್ಥಿ ಸಂಘದ ಕಟ್ಟಡದಲ್ಲಿದ್ದ ಜಿನ್ನಾ ಅವರ ಭಾವಚಿತ್ರವನ್ನು ಅಲ್ಲಿಂದ ತೆರವುಗೊಳಿಸುವಂತೆ ಸ್ಥಳೀಯ ಬಿಜೆಪಿ ಸಂಸದ ಸತೀಶ್ ಗೌತಮ್ ಒತ್ತಾಯಿಸಿದ್ದರು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು 2018ರ ಮೇ ತಿಂಗಳಲ್ಲಿ ಎಎಂಯುನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಇದೊಂದು ರಾಷ್ಟ್ರೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿದ್ದ ಎಎಂಯು ವಿದ್ಯಾರ್ಥಿಗಳು, “ಜಿನ್ನಾ ಅವರು ಇತಿಹಾಸದ ಭಾಗವಾಗಿದ್ದಾರೆ, ಆದರೆ ಅದೇ ನಮ್ಮ ಸಿದ್ಧಾಂತವಲ್ಲ” ಎಂದು ಹೇಳಿಕೊಂಡಿತ್ತು.

ಆದರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಈ ಯುವ ದಂತ ವೈದ್ಯನನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇ ತಡ, ಬಿಜೆಪಿ ತನ್ನ ಎಂದಿನ ಕೊಳಕು ಧರ್ಮಾಧಾರಿತ ರಾಜಕೀಯ ದಾಳವನ್ನು ಹೊರಬಿಟ್ಟಿದೆ. ಜಿನ್ನಾ ಹೆಸರಿನ ಮೂಲಕ ಜನರನ್ನು  ಧ್ರುವೀಕರಣಗೊಳಿಸುವ ತನ್ನ ಚಾಳಿಗೆ ಮುನ್ನುಡಿಯಿಟ್ಟಿದೆ.

ಆದರೆ ಅಭ್ಯರ್ಥಿ  ಉಸ್ಮಾನಿ ಮಾತ್ರ, “ಭಾರತಿಯರಿಗೆ ಯಾರಿಗೂ ಜಿನ್ನಾ ಅವರ ಸಿದ್ಧಾಂತದ ಮೇಲೆ ನಂಬಿಕೆಯಿಲ್ಲ. ಆದರೂ ಯಾಕಾಗಿ ಕೆಲವರು ಜಿನ್ನಾ ಅವರ ಆತ್ಮವನ್ನು ಮತ್ತೆ ಬಡಿದೆಬ್ಬಿಸುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.  “ನಾನು ಆ ಭಾವಚಿತ್ರವನ್ನು ಅಲ್ಲಿ ಹಾಕಲಿಲ್ಲ, ಆದ್ದರಿಂದ ಈ ಬಗ್ಗೆ ನಾನ್ಯಾಕೆ ಉತ್ತರಿಸಬೇಕು” ಎಂದು ಉಸ್ಮಾನಿ ಕೇಳಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಈ ಚಿತ್ರವನ್ನು ತೆಗೆದು ಹಾಕುವಂತೆ ಪ್ರತಿಭಟಿಸಿದ ವರದಿ 2018ರ ಮೇ ತಿಂಗಳಲ್ಲಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದಾಗಲೇ ನಾನೂ ಆ ಭಾವಚಿತ್ರವನ್ನು ಗಮನಿಸಿದ್ದು’ ಎಂದು ಅಂದಿನ ಘಟನೆಯನ್ನು ಅವರು ಸ್ಮರಿಸಿಕೊಂಡಿದ್ದಾರೆ.

1938ರಲ್ಲಿ ಸಂಘದ ಜೀವಿತಾವಧಿ ಸದಸ್ಯತ್ವವನ್ನು ನೀಡಿದ ನಂತರ ಜಿನ್ನಾ ಅವರ ಭಾವಚಿತ್ರವನ್ನು ಎಎಂಯು ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಇರಿಸಲಾಗಿತ್ತು. ‘1920ರಲ್ಲಿ ವಿವಿ ಅಸ್ತಿತ್ವಕ್ಕೆ ಬಂದಾಗ ಜೀವಿತಾವಧಿ ಸದಸ್ಯತ್ವ ಪಡೆದ ಮೊದಲಿಗರು ಮಹಾತ್ಮಾ ಗಾಂಧೀಜಿಯವರಾಗಿದ್ದಾರೆ. ಕ್ಯಾಂಪಸ್ ನಲ್ಲಿ ಜಿನ್ನಾ ಅವರ ಜೊತೆ, ಎಸ್ ರಾಧಾಕೃಷ್ಣನ್, ಸಿ ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರೂ, ಇ.ಎಂ. ಫಾಸ್ಟರ್ ಸೇರಿದಂತೆ ದೇಶೀ ಹಾಗೂ ಹಲವು ವಿದೇಶಿಗಳ ಭಾವಚಿತ್ರಗಳಿವೆ.

ಇದೇ ವೇಳೆ ಉಸ್ಮಾನಿ ಅವರು, ಜಿನ್ನಾ ಅವರ ಭಾವಚಿತ್ರಗಳನ್ನು ದೇಶದ ಎಲ್ಲ ಸರ್ಕಾರಿ ಕಟ್ಟಡಗಳಿಂದ ತೆಗೆದರೆ ವಿದ್ಯಾರ್ಥಿ ಸಂಘಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜಂತಸಿಂಗ್ ಅವರಿಗೆ ಪತ್ರ ಬರೆದಿದ್ದರು. ಆದರೇ ಇದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

“ಬಿಜೆಪಿ ಎಂದಿನಂತೆ ತನ್ನ ಧ್ರುವೀಕರಣ ರಾಜಕಾರಣವನ್ನು ಮಾಡಲು ಅತ್ಯುತ್ತಮ ವಿಷಯವೊಂದನ್ನು ಕಂಡುಕೊಂಡಿದೆ. ಆದರೆ ನಾನು ಜನವಿರೋಧಿ ವಿಷಯಗಳನ್ನು ಎತ್ತುವ ಪ್ರಬಲ, ನಿರ್ಭೀತ ಮುಸ್ಲಿಂ ಧ್ವನಿಯಾಗಿರುತ್ತೇನೆ. ಆದರೆ ಬಿಜೆಪಿಗೆ ಇದು ಅಲರ್ಜಿ ತರುವ ವಿಷಯವಾಗಿದೆ” ಎಂದು ಉಸ್ಮಾನಿ ತನ್ನ ವಿರುದ್ಧದ ಟೀಕೆಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ.

ಬಿಹಾರ ಚುನಾವಣೆಗೆ ಕಾಂಗ್ರೆಸ್ ಈ ಬಾರಿ 12 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಒಟ್ಟು  67 ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ವೇಳೆ ಕೋಮುವಾದವನ್ನೇ ತನ್ನ ಅಜೆಂಡಾವಾಗಿರಿಸಿರುವ ಬಿಜೆಪಿ ಯಾವುದೇ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ.

Join Whatsapp