ಮಂಗಳೂರು ಗೋಲಿಬಾರ್ ಪ್ರಕರಣ : ಆರೋಪಿಗಳಿಗೆ ಸುಪ್ರೀಮ್ ಕೋರ್ಟ್ ಜಾಮೀನು

Prasthutha|

ಕಳೆದ ವರ್ಷ ಡಿಸಂಬರ್ 19ರಂದು ಮಂಗಳೂರಿನಲ್ಲಿ NRC ಹಾಗೂ CAA ವಿರುದ್ಧ ನಡೆದಿದ್ದ ಪ್ರತಿಭಟನೆ ಹಾಗೂ ಆ ನಂತರ ಅವರ ಮೇಲೆ ಪೊಲಿಸರು ನಡೆಸಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಪಟ್ಟು ಬಂಧಿತರಾಗಿದ್ದ 22 ಆರೋಪಿಗಳಿಗೆ ಸುಪ್ರೀಮ್ ಕೋರ್ಟ್ ಇಂದು ಜಾಮೀನು ನೀಡಿದೆ.

- Advertisement -

ಆರೋಪಿಗಳ ಪರ ಸುಪ್ರೀಮ್ ಕೋರ್ಟ್ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮಾರ್ಗದರ್ಶನದಲ್ಲಿ, ಕೇರಳದ ಮಾಜಿ ನ್ಯಾಯಾಧೀಶ ಆರ್ ಬಸಂತ್ ನೇತೃತ್ವದ ವಕೀಲರ ತಂಡ ಸುಪ್ರೀಮ್ ಕೋರ್ಟಿನಲ್ಲಿ ಈ ಪ್ರಕ್ರಣದ ಪರ ವಾದ ಮಂಡಿಸಿತ್ತು.  ಬೀರನ್ ಅವರು ಸುಪ್ರೀಮ್ ಕೋರ್ಟಿನಲ್ಲಿ ಆರೋಪಿಗಳ ಪರ ವಾದಿಸಿದ್ದರು.

ತೀರ್ಪು ಸಂತೋಷ ತಂದಿದೆ’ : ಮಾಜಿ ಶಾಸಕ ಮೊಯ್ದಿನ್ ಬಾವಾ

- Advertisement -

“ಸುಪ್ರೀಮ್ ಕೋರ್ಟಿನ ಈ ತೀರ್ಪು ಎಲ್ಲರಿಗೂ ಸಹಜವಾಗಿ ಸಂತೋಷ ತಂದಿದೆ. ಈ ಒಂದು ಪ್ರಕರಣದಲ್ಲಿ ಜಿಲ್ಲೆಯ ಪ್ರತಿಯೊಂದು ಸಂಘಟನೆಗಳ, ಪಕ್ಷಗಳ ಪ್ರಮುಖರು ಯಾವುದೇ ಭಿನ್ನತೆ ತೋರದೆ ಇದರ ಹಿಂದೆ ಕೆಲಸ ಮಾಡಿದ್ದರು. ಬೆಂಗಳೂರು ಡಿಜೆ ಹಳ್ಳಿ ಘಟನೆಯನ್ನು ಇದಕ್ಕೆ ಸಮೀಕರಿಸುವ ಪ್ರಯತ್ನಗಳ ಮಧ್ಯೆಯೂ ಜಾಮೀನು ದೊರೆತಿದ್ದು, ಮಂಗಳೂರು ಘಟನೆಯಲ್ಲಿ ಪೊಲೀಸರ ಲೋಪ ದೋಷಗಳೂ ಇದೆ. ಆದುದರಿಂದ ಈ ಘಟನೆಗೂ ಬೆಂಗಳೂರು ಘಟನೆಗೂ ಸಂಬಂಧ ಕಲ್ಪಿಸುವುದು ತಪ್ಪಾಗುತ್ತದೆ” ಎಂದು ಮೊಯ್ದಿನ್ ಬಾವಾ ಅವರು ತಮ್ಮ ಅಭಿಪ್ರಾಯವನ್ನು ‘ಪ್ರಸ್ತುತ’ ತಂಡದೊಂದಿಗೆ ಹಂಚಿಕೊಂಡರು.

‘ಯುವಕರು ಎಂದಿಗೂ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿನ ಪ್ರತಿಭಟನೆಗಳನ್ನು ನಡೆಸಬೇಕು” ಎಂದು ಮೊಯ್ದಿನ್ ಬಾವಾ ಈ ವೇಳೆ ಯುವಕರಿಗೆ ಕಿವಿ ಮಾತು ಹೇಳಿದರು. ಈ ಗೋಲಿಬಾರ್  ಘಟನೆಯ ನಂತರ ಸಂಕಷ್ಟಗಳನ್ನು ಅನುಭವಿಸಿದ ಸಂತ್ರಸ್ತರ ಕುಟುಂಬಗಳ ನೋವಿನೊಂದಿಗೆ ನಾವೆಲ್ಲರೂ ಸದಾ ಕಾಲ ಇರುತ್ತೇವೆ ಎಂದೂ ಅವರು ಈ ವೇಳೆ ಹೇಳಿದರು.

Join Whatsapp