ಮಂಗಳೂರು | ಮಗುಚಿಬಿದ್ದ ಮೀನುಗಾರಿಕೆ ಬೋಟ್; 6 ಮಂದಿ ನಾಪತ್ತೆ

Prasthutha|

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮಂಗಳೂರಿನ ಬೋಳಾರದ ಬೋಟೊಂದು ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿ, ಬೋಟ್ ವಾಪಸ್ ಬರುವಾಗ ಮುಳುಗಡೆಯಾಗಿದೆ ಎನ್ನಲಾಗಿದೆ.

- Advertisement -

ದೋಣಿಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 16 ಮಂದಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಆಗಮಿಸಿದೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯೊಂದು ತಿಳಿಸಿದೆ.  

Join Whatsapp