ದೇಶದ ಎಲ್ಲಾ ರೈತ ಸಂಘಗಳನ್ನೂ ಆಹ್ವಾನಿಸದೆ ಮಾತುಕತೆ ಇಲ್ಲ : ರೈತ ನಾಯಕರ ಪಟ್ಟು

Prasthutha|

ನವದೆಹಲಿ : ದೇಶದ ಎಲ್ಲಾ ರೈತ ಸಂಘಟನೆಗಳನ್ನೂ ಮಾತುಕತೆಗೆ ಆಹ್ವಾನಿಸದ ಹೊರತು ತಾವು ಮಾತುಕತೆಗೆ ಬರುವುದಿಲ್ಲ ಎಂದು ಪಂಜಾಬ್ ರೈತ ಸಂಘರ್ಷ ಸಮಿತಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ರೈತ ಸಂಘಗಳನ್ನು ನಿನ್ನೆ ಸರಕಾರ ಮಾತುಕತೆಗೆ ಆಹ್ವಾನಿಸಿತ್ತು.

- Advertisement -

ಆದರೆ, ಸರಕಾರದ ಈ ನಡೆಯನ್ನು ಟೀಕಿಸಿರುವ ರೈತ ಸಂಘಟನೆಗಳು, ದೇಶದ ಎಲ್ಲಾ ರೈತ ಸಂಘಟನೆಗಳನ್ನೂ ಮಾತುಕತೆಗೆ ಆಹ್ವಾನಿಸದ ಹೊರತು ತಾವು ಮಾತುಕತೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿವೆ.

- Advertisement -