November 10, 2020

ಮುನ್ನಡೆ ಸಾಧಿಸಿದ ಎನ್ ಡಿಎ | ಬಿಹಾರದಲ್ಲಿ ಮತ್ತೆ ನಿತೀಶ್ ನಾಯಕತ್ವಕ್ಕೇ ಮನ್ನಣೆ ಸಿಗುತ್ತಾ?

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದೆ. ಆರಂಭಿಕ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದ ಆರ್ ಜೆಡಿ ನೇತೃತ್ವದ ಮಹಾಘಟ ಬಂಧನ್, ಇದೀಗ ಹಿನ್ನಡೆ ಸಾಧಿಸುತ್ತಿದ್ದು, ಜೆಡಿಯು ನೇತೃತ್ವದ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಎನ್ ಡಿಎ ಮೈತ್ರಿ ಕೂಟ 129 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆರ್ ಜೆಡಿ ಮೈತ್ರಿ ಕೂಟದ 97 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಎಲ್ ಜೆಪಿ ಆರು ಸೀಟುಗಳಲ್ಲಿ ಮತ್ತು ಇತರರು 9 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.




ಟಾಪ್ ಸುದ್ದಿಗಳು