‘ರಿಪಬ್ಲಿಕ್ ಟಿವಿ’ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಬಂಧನ | ಟಿಆರ್ ಪಿ ತಿರುಚಿದ ಪ್ರಕರಣ

Prasthutha: November 10, 2020

ಮುಂಬೈ : ‘ರಿಪಬ್ಲಿಕ್ ಟಿವಿ’ ಪ್ರಧಾನ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನದ ಆರು ದಿನಗಳ ಬಳಿಕ, ಇದೀಗ ಅದೇ ಚಾನೆಲ್ ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಟಿಆರ್ ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿ ಸಿಂಗ್ ಬಂಧನವಾಗಿದೆ. ಸಿಂಗ್ ವಿರುದ್ಧ ಐಪಿಸಿ ಕಲಂ 420 ಮತ್ತು ಕಲಂ 120ಬಿಯಡಿ ದೂರು ದಾಖಲಾಗಿದೆ.

ಗೋಸ್ವಾಮಿ ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಆರು ದಿನಗಳ ಹಿಂದೆಯಷ್ಟೇ ಬಂಧಿತನಾಗಿದ್ದಾನೆ. ಇದೀಗ ಚಾನೆಲ್ ನ ಸಹಾಯಕ ಉಪಾಧ್ಯಕ್ಷ ಸಿಂಗ್ ಬಂಧನದ ಮೂಲಕ ಚಾನೆಲ್ ನ ಒಂದೊಂದೇ ಯಡವಟ್ಟುಗಳು ಬಹಿರಂಗವಾಗ ತೊಡಗಿವೆ.

ಇತರ ಚಾನೆಲ್ ಗಳಿಗಿಂತ ತಾವೇ ಮುಂದಿದ್ದೇವೆ ಎಂದು ತೋರಿಸಲು ಟಿಆರ್ ಪಿಯನ್ನು ತಿರುಚಿದ ಆರೋಪ ‘ರಿಪಬ್ಲಿಕ್ ಟಿವಿ’ ಮೇಲಿದೆ. ಸಿಂಗ್ ಅವರನ್ನು ಇಂದು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ.   

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ