ಝೀರೋ ಟ್ರಾಫಿಕ್ ನಲ್ಲಿ ಪುತ್ತೂರಿನಿಂದ ಬೆಂಗಳೂರು ಆಸ್ಪತ್ರೆಗೆ ಯುವತಿ ಶಿಫ್ಟ್! | ಮತ್ತೊಮ್ಮೆ ಸಾಹಸ ಮೆರೆದ ಆಂಬುಲೆನ್ಸ್ ಚಾಲಕ ಹನೀಫ್ ಮತ್ತು ತಂಡ

Prasthutha: December 2, 2020

ಪುತ್ತೂರು : ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಂಭೀರ ಶ್ವಾಸಕೋಸದ ಸಮಸ್ಯೆಯಿರುವ ಯುವತಿಯೊಬ್ಬಳನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಆ ಮೂಲಕ ಆಂಬುಲೆನ್ಸ್ ಚಾಲಕ ಹನೀಫ್ ಮತ್ತು ಅವರೊಂದಿಗಿನ ತಂಡ ಮತ್ತೊಮ್ಮೆ ಸಾಹಸ ಮೆರೆದಿದೆ. ಬೆಳಗ್ಗೆ 11:15 ಗಂಟೆ ಸುಮಾರಿಗೆ ಪುತ್ತೂರಿನಿಂದ ಹೊರಟ ಆಂಬುಲೆನ್ಸ್ ಮಧ್ಯಾಹ್ನ 3:30ರ ಸುಮಾರಿಗೆ ಬೆಂಗಳೂರಿನ ವೈಟ್ ಫೀಲ್ಡ್ ವೈದೇಹಿ ಆಸ್ಪತ್ರೆ ತಲುಪಿದೆ.  

ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಮಂಗಳೂರಿನ ಕೆಎಂಸಿಸಿ ಆಸ್ಪತ್ರೆಯ ವಿಶೇಷ ಆಂಬುಲೆನ್ಸ್ ಮೂಲಕ ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ಇಂದು ಬೆಳಗ್ಗೆ 11:15 ಗಂಟೆಗೆ ಕರೆದೊಯ್ಯಲಾಯಿತು.

ಸಕಲೇಶಪುರದ ಅರೆಹಳ್ಳಿ ಮೂಲದ 22ರ ಹರೆಯದ ಸುಹಾನಾ ಎಂಬಾಕೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ, ಆಕೆಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಸುರೇಶ್ ಪುತ್ತೂರಾಯರ ಸಲಹೆಯ ಮೇರೆಗೆ, ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಬೆಂಗಳೂರು ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು.

ಬಡ ಕುಟುಂಬದ  ಯುವತಿಯ ಚಿಕಿತ್ಸೆ ವೆಚ್ಚ ಭರಿಸಲು ಹಲವು ಸಂಘ ಸಂಸ್ಥೆಗಳು ನೆರವಿಗೆ ಬಂದಿದ್ದು, ದಾನಿಗಳು ದೊಡ್ಡ ಮಟ್ಟದ ನೆರವು ನೀಡಿದ್ದಾರೆ.

ಯುವತಿಯನ್ನು ಪುತ್ತೂರಿನಿಂದ ಬೆಂಗಳೂರು ಆಸ್ಪತ್ರೆಗೆ ವರ್ಗಾಯಿಸಲು ನೆರವು ನೀಡಿದ ಎಲ್ಲರಿಗೂ ಹನೀಫ್ ಮತ್ತು ತಂಡ ಧನ್ಯವಾದಗಳನ್ನು ಅರ್ಪಿಸಿದೆ. ಆಸ್ಪತ್ರೆಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಫೇಸ್ ಬುಕ್ ಲೈವ್ ನೀಡಲಾಗಿತ್ತು. ಸಂಜೆ 4:30ರೊಳಗೆ ಆಸ್ಪತ್ರೆ ತಲುಪುವ ಗುರಿ ಹೊಂದಿತ್ತು. ಆದರೆ, 3:20ರ ಸುಮಾರಿಗೆ ನಾವು ಆಸ್ಪತ್ರೆ ತಲುಪಿದ್ದೇವೆ ಎಂದು ಫೇಸ್ ಬುಕ್ ಲೈವ್ ನಲ್ಲಿ ತಂಡದ ಸದಸ್ಯರೊಬ್ಬರು ಹೇಳುತ್ತಿರುವುದು ಕೇಳಿದೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!