ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಂ ವಿರುದ್ಧ ಲೈಂಗಿಕ ಕಿರುಕುಳದ ಆರೋಪ | ಯುವತಿಯಿಂದ ಪತ್ರಿಕಾಗೋಷ್ಠಿ

Prasthutha: December 2, 2020

ಲಾಹೋರ್ : ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಂ ವಿರುದ್ಧ ದೈಹಿಕ ದುರ್ಬಳಕೆ ಮತ್ತು ಹಣಕಾಸು ವಂಚನೆಯ ಆರೋಪ ಅವರ ಮಾಜಿ ಸ್ನೇಹಿತೆಯೊಬ್ಬರು ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯೊಂದನ್ನು ನಡೆಸಿರುವ ಹಮೀಝಾ ಮುಖ್ತರ್ ಎಂಬಾಕೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುರ್ ಆನ್ ಹಿಡಿದು, ತಾನು ಸತ್ಯ ನುಡಿಯುತ್ತಿರುವುದಾಗಿ ಹೇಳಿದ್ದಾಳೆ.

ತನಗೀಗ 24 ವಯಸ್ಸು ಎಂದಿರುವ ಹಮೀಝಾ, 14 ವಯಸ್ಸಿನಿಂದಲೇ ತಮ್ಮ ನಡುವೆ ಪ್ರೇಮ ಸಂಬಂಧವಿತ್ತು ಎಂದಿದ್ದಾರೆ. 2011ರಲ್ಲಿ ನ್ಯಾಯಾಲಯದಲ್ಲಿ ಮದುವೆಯಾಗುವ ಉದ್ದೇಶದಿಂದ ತಾನು ಬಾಬರ್ ಜೊತೆ ಮನೆಬಿಟ್ಟು ಪರಾರಿಯಾಗಿದ್ದೆ. ಎರಡು ದಿನ ಲಾಹೋರ್ ನ ವಹಾದತ್ ರೋಡ್ ನಲ್ಲಿ ಬಾಬರ್ ನ ಸ್ನೇಹಿತನ ಮನೆಯಲ್ಲಿದ್ದೆ. ಬಳಿಕ 2012ರ ವರೆಗೆ ಫಿರ್ದೋಸ್ ಮಾರ್ಕೆಟ್ ನ ಮಾಡೆಲ್ ಕಾಲನಿಯಲ್ಲಿ ಬಾಬರ್ ತನ್ನನ್ನು ಇಟ್ಟಿದ್ದೆ ಎಂದು ಹಮೀಝಾ ಹೇಳಿದ್ದಾರೆ.

ಬಾಬರ್ ಹೆಸರು ಹಾಳು ಮಾಡಲು ಭಾರತದ ಗುಪ್ತಚರ ಸಂಸ್ಥೆ ‘ರಾ’ ನಂಟು ಹಮೀಝಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂಬ ಆರೋಪವಿದೆ ಎಂದ ಸಂದರ್ಶಕನ ಮಾತನ್ನು ಆಕೆ ನಿರಾಕರಿಸಿದ್ದಾರೆ.

ತಾನು ಮನೆಯಿಂದ ಪರಾರಿಯಾಗುವ ವೇಳೆ ಚಿನ್ನ ಕದ್ದೊಯ್ದಿದ್ದು, ಮತ್ತು ದುಡಿಯಲಾರಂಭಿಸಿದ ಬಳಿಕ ಬಂದ ಹಣವನ್ನೆಲ್ಲಾ ಬಾಬರ್ ದುರ್ಬಳಕೆ ಮಾಡಿದ್ದಾರೆ ಎಂದು ಕೂಡ ಹಮೀಝಾ ಆಪಾದಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಹಮೀಝಾ ಅವರ ನ್ಯಾಯವಾದಿ, ಮದುವೆಯ ಸುಳ್ಳು ವಾಗ್ದಾನದ ಅಪರಾಧಕ್ಕೆ ನ್ಯಾಯಾಲಯದಲ್ಲಿ 25 ವರ್ಷಗಳ ವರೆಗೂ ಶಿಕ್ಷೆ ಆಗಬಹುದು ಎಂದು ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ