ಕೊನೆಗೂ ಕೊರೊನಗೆ ಸಿಕ್ಕಿತು ಲಸಿಕೆ | ಬ್ರಿಟನ್ ನಲ್ಲಿ ಮುಂದಿನ ವಾರದಿಂದ ಜನಸಾಮಾನ್ಯರಿಗೆ ಔಷಧಿ

Prasthutha|

ಲಂಡನ್ : ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನ ಸೋಂಕಿಗೆ ಕೊನೆಗೂ ಪ್ರಬಲ ಅಸ್ತ್ರವೊಂದು ಸಿಕ್ಕಂತಾಗಿದೆ. ಕೋವಿಡ್ 19ಗೆ ಬ್ರಿಟನ್ ನಲ್ಲಿ ಲಸಿಕೆ ಪತ್ತೆಹಚ್ಚಲಾಗಿದ್ದು, ಮುಂದಿನ ವಾರದಿಂದಲೇ ಜನಸಾಮಾನ್ಯರಿಗೆ ಲಭ್ಯವಿರಲಿದೆ ಎಂದು ಸಂಸ್ಥೆಯೊಂದು ತಿಳಿಸಿದೆ. ಆ ಮೂಲಕ ಜಗತ್ತಿನಲ್ಲಿ ಸರಕಾರದಿಂದ ಅನುಮತಿ ಪಡೆದ ಮೊದಲ ಲಸಿಕೆ ಇದಾಗಿದೆ.

ಅಲ್ಲದೆ, ಇಡೀ ವಿಶ್ವದಲ್ಲೇ ಕೋವಿಡ್ 19ಗೆ ಲಸಿಕೆ ಬಿಡುಗಡೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. ಬ್ರಿಟನ್ ನ ಔಷಧ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳ ನಿಯಂತ್ರಣ ಸಂಸ್ಥೆ, ಲಸಿಕೆ ಬಗ್ಗೆ ನಮಗೆ ವಿಶ್ವಾಸವಿದೆ. ಈಗಾಗಲೇ ರೋಗಿಗಳ ಮೇಲೆ ಹಾಗೂ ವೈಜ್ಞಾನಿಕ ಪ್ರಯೋಗದಲ್ಲಿ ಶೇ.95ರಷ್ಟು ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.

- Advertisement -

ಅಮೆರಿಕ ಮೂಲದ ಫೀಝರ್ ಮತ್ತು ಜರ್ಮನ್ ಮೂಲದ ಬಯೋಟೆಕ್ ಸಂಸ್ಥೆಗಳು ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಎಲ್ಲಾ ವಯೋಮಾನದವರಿಗೂ ಇದನ್ನು ಬಳಸಬಹುದು ಎನ್ನಲಾಗಿದೆ.

ಈ ಲಸಿಕೆಯನ್ನು 8 ಡಿಗ್ರಿ ಸೆಲ್ಸಿಯಸ್ ಗೆ ಶೇಖರಣೆ ಮಾಡಬೇಕು. ಇದನ್ನು ರೋಗಿಗಳಿಗೆ ನೀಡಿದಾಗ ಐದು ದಿನಗಳಲ್ಲಿ ಪರಿಣಾಮ ಬಿರಲಿದೆ. ಇದರಿಂದ ಯಾವ ಅಡ್ಡ ಪರಿಣಾಮವೂ ಇಲ್ಲ ಎಂದು ತಿಳಿಸಲಾಗಿದೆ.

- Advertisement -