ಬಿಜೆಪಿ ಸೇರ್ಪಡೆಗೊಳ್ಳಲು ಸಿದ್ಧಗೊಂಡಿರುವ ಸುವೇಂದು ಅಧಿಕಾರಿಗೆ ‘ಝಡ್’ ಕೆಟಗರಿ ಭದ್ರತೆ

Prasthutha|

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಲು ಸಿದ್ಧವಾಗಿರುವ ಸುವೇಂದು ಅಧಿಕಾರಿಗೆ ಕೇಂದ್ರ ಗೃಹ ಸಚಿವಾಲಯ ‘ಝಡ್’ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದೆ.

ಕೇಂದ್ರ ಭದ್ರತಾ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ, ಸುವೇಂದು ಅಧಿಕಾರಿ ಅವರ ಭದ್ರತಾ ವ್ಯವಸ್ಥೆ ಪರಿಶೀಲಿಸಲಾಗಿದೆ. ಅವರಿಗೆ ಪಶ್ಚಿಮ ಬಂಗಾಳದಲ್ಲಿ ಬುಲೆಟ್ ಪ್ರೂಫ್ ಕಾರಿನೊಂದಿಗೆ ಸಿಆರ್ ಪಿಎಫ್ ಯೋಧರ ರಕ್ಷಣೆಯುಳ್ಳ ‘ಝಡ್’ ಕೆಟಗರಿ ಭದ್ರತೆಯಿರುತ್ತದೆ ಮತ್ತು ಇತರ ರಾಜ್ಯಗಳಲ್ಲಿ ‘ವೈ ಪ್ಲಸ್’ ಭದ್ರತೆಯಿರುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

- Advertisement -

ಇತ್ತಿಚೆಗೆ ಟಿಎಂಸಿಗೆ ಹಾಗೂ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುವೇಂದು ಅಧಿಕಾರಿ, ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ.

- Advertisement -