ದನ ಕಳವಿನ ಶಂಕೆ | ಗುಂಪಿನಿಂದ ಯುವಕನ ಥಳಿಸಿ ಹತ್ಯೆ

Prasthutha|

ಪಾಟ್ನಾ : ಬಿಹಾರದ ಪಾಟ್ನಾದಲ್ಲಿ 32ರ ಹರೆಯದ ಯುವಕನೊಬ್ಬ ದನ ಕದ್ದಿದ್ದಾನೆಂಬ ಶಂಕೆಯಲ್ಲಿ, ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಪಾಟ್ನಾದ ಫೂಲ್ವಾರಿಶರೀಫ್ ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮುಂಜಾನೆ ಮೂರು ಗಂಟೆ ವೇಳೆ ಮುಹಮ್ಮದ್ ಆಲಂಗೀರ್ ಮತ್ತು ಇನ್ನೊಬ್ಬ ದನ ಕಳ್ಳತನಕ್ಕೆ ಬಂದಿದ್ದರೆನ್ನಲಾಗಿದೆ. ಈ ವೇಳೆ ಗುಂಪು ಆಲಂಗೀರ್ ಅನ್ನು ಹಿಡಿದಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಆಲಂಗೀರ್ ಮೇಲೆ ಗಂಟೆಗಟ್ಟಲೆ ಥಳಿಸಲಾಗಿದ್ದು, ಮಧ್ಯಾಹ್ನದ ವೇಳೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.  

- Advertisement -