ಅಪಹರಣಗೊಂಡಿದ್ದ ನೈಜೀರಿಯಾದ 300 ವಿದ್ಯಾರ್ಥಿಗಳ ಬಿಡುಗಡೆ

Prasthutha|

ಮೈದುಗುರಿ (ನೈಜೀರಿಯಾ) : ಕಳೆದ ವಾರ ನೈಜೀರಿಯಾದಲ್ಲಿ ಸಶಸ್ತ್ರದಾರಿ ಗುಂಪಿನಿಂದ ಅಪಹರಿಸಲ್ಪಟ್ಟಿದ್ದ ಸುಮಾರು 300 ಶಾಲಾ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

344 ಬೋರ್ಡಿಂಗ್ ಸ್ಕೂಲ್ ವಿದ್ಯಾರ್ಥಿಗಳನ್ನು ಭದ್ರತಾ ಸಿಬ್ಬಂದಿ ರಾಜ್ಯ ರಾಜಧಾನಿಗೆ ಕರೆ ತರಲಾಗುತ್ತಿದೆ. ಅವರನ್ನು ವೈದ್ಯಕೀಯ ಚಿಕಿತ್ಸೆ ತಪಾಸಣೆ ಮಾಡಿದ ಬಳಿಕ ಮನೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಕತ್ಸಿನಾ ರಾಜ್ಯದ ರಾಜ್ಯಪಾಲ ಅಮೀನು ಬೆಲ್ಲೊ ಮಸರಿ ನೈಜೀರಿಯಾದ ಸರಕಾರಿ ಟಿವಿಯಲ್ಲಿ ಘೋಷಣೆ ಮಾಡಿದ್ದಾರೆ.

- Advertisement -

ವಿದ್ಯಾರ್ಥಿಗಳ ಬಿಡುಗಡೆಯನ್ನು ಅಧ್ಯಕ್ಷ ಮುಹಮ್ಮದು ಬುಹಾರಿ ಸ್ವಾಗತಿಸಿದ್ದಾರೆ. ಕತ್ಸಿನಾ ರಾಜ್ಯದ ಕಂಕಾರಾ ಗ್ರಾಮದ ಸರಕಾರಿ ವಿಜ್ಞಾನ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಶುಕ್ರವಾರ ಅಪಹರಿಸಲಾಗಿತ್ತು. ಬೊಕೊ ಹರಾಮ್ ಉಗ್ರ ಸಂಘಟನೆ ವಿದ್ಯಾರ್ಥಿಗಳ ಅಪಹರಣ ಹೊಣೆ ಹೊತ್ತುಕೊಂಡಿದೆ ಎಂದು ವರದಿಗಳು ತಿಳಿಸಿದ್ದವು.

- Advertisement -