ಭಾರತದ ಅಂಡರ್ 19 ಕ್ರಿಕೆಟ್ ತಂಡದ ಮಾಜಿ ನಾಯಕ ಅವಿ ಬರೋಟ್ ಹೃದಯಘಾತದಿಂದ ನಿಧನ

Prasthutha|

ಪಣಜಿ: ಭಾರತದ ಅಂಡರ್ 19 ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು 2019 – 2020 ಸಾಲಿನ ರಣಜಿ ಟ್ರೋಫಿ ವಿಜೇತ ತಂಡದ ಆಟಗಾರ ಅವಿ ಬರೋಟ್ ಹೃದಯಘಾತದಿಂದ ಇಂದು ನಿಧನರಾಗಿದ್ದಾರೆ.

- Advertisement -

ತನ್ನ ವೃತ್ತಿಜೀವನದಲ್ಲಿ ಹರ್ಯಾಣ ಮತ್ತು ಗುಜರಾತ್ ಗಳನ್ನು ಪ್ರತಿನಿಧಿಸಿದ್ದ ಆಟಗಾರ ಇಂದು ಅಹ್ಮದಾಬಾದ್ ತನ್ನ ಸ್ವ-ಗೃಹದಲ್ಲಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತನ್ನ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಅವಿ ಅವರು ತಾಯಿ ಮತ್ತು ಮಗುವನ್ನು ಅಗಲಿದ್ದಾರೆ.

ಉತ್ಸಾಹಭರಿತ ಹುಡುಗನಾಗಿದ್ದ ಅವಿ ಬರೋಟ್ ಅವರ ಪ್ರತಿಭೆಯನ್ನು ಕಂಡು ಆತನನ್ನು ಹರ್ಯಾಣದಿಂದ ಸೌರಾಷ್ಟ್ರ ತಂಡಕ್ಕೆ ಪರಿಚಯಿಸಿದೆ ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್, ಇದರ ಅಧ್ಯಕ್ಷರಾದ ಜಯದೇವ್ ಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಪ್ರಸಕ್ತ ಅವಿ ಅವರು ತಾಯಿ ಮತ್ತು ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಆತನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯ ತಗುಲಲಿದೆ ಎಂದು ಶಾ ಹೇಳಿದರು.

ಬರೋಟ್ ಅವರು 38 ಪ್ರಥಮ ದರ್ಜೆ, 38 ಎ ಪಟ್ಟಿ ಮತ್ತು 20 ದೇಶಿಯ ಟಿ 20 ಪಂದ್ಯಗಳನ್ನು ಆಡಿದ್ದಾರೆ. ವಿಕೆಟ್ ಕೀಪರ್ ಆಗಿದ್ದ ಅವರು ಬ್ಯಾಟ್ಸ್ ಮ್ಯಾನ್ ಕೂಡ ಆಗಿದ್ದರು. ಪ್ರಥಮ ದರ್ಜೆ ಪಂದ್ಯಗಳಲ್ಲಿ 1547 ರನ್, ಲಿಸ್ಟ್ ಎ ಪಂದ್ಯದಲ್ಲಿ 1030 ಮತ್ತು ಟಿ 20 ಯಲ್ಲಿ 717 ರನ್ ಗಳಿಸಿದರು.

Join Whatsapp