ರೈತ ಹೋರಾಟದ ವೇದಿಕೆಯಲ್ಲೇ ಹಸೆಮಣೆ ಏರಿದ ಯುವ ಜೋಡಿ!

Prasthutha|

ಭೋಪಾಲ್ : ಕೇಂದ್ರ ಸರಕಾರದ ವಿವಾದಿತ ರೈತ ವಿರೋಧಿ ಕಾನೂನನ್ನು ವಿರೋಧಿಸಿ ಮಧ್ಯಪ್ರದೇಶದ ಭೋಪಾಲ್​ ನ ರೇವಾ ಎಂಬ ಪಟ್ಟಣದಲ್ಲಿಯೂ ಕಳೆದ ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ನಡುವೆಯೇ ರೈತ ಸಂಘದ ನಾಯಕರ ಮಕ್ಕಳು ಸಪ್ತಪದಿ ತುಳಿಯುವ ಮೂಲಕ ಪ್ರತಿಭಟನಾ ಸ್ಥಳವೇ ಮದುವೆ ಛತ್ರವಾಗಿ ಬದಲಾಗಿದೆ.

- Advertisement -

 ಡಾ.ಬಿ.ಆರ್​. ಅಂಬೇಡ್ಕರ್​ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ರೈತರ ಮಕ್ಕಳಾದ ಸಚಿನ್ ಹಾಗೂ ಅಸ್ಮಾ ಎಂಬ ಯುವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯಲ್ಲಿ ವಧು-ವರನ ಕೆಲ‌ಸಂಬಂಧಿಕರು ಭಾಗವಹಿಸಿದ್ದರು.

“ಮಕ್ಕಳ ಮದುವೆ ಎಂದು ಹೋರಾಟವನ್ನು ಕೈಬಿಡಲು ನಾವು ತಯಾರಿಲ್ಲ. ಪ್ರತಿಭಟನಾ ಸ್ಥಳದಲ್ಲಿಯೇ ಮದುವೆ ಮಾಡಿಸುವ ಮೂಲಕ ಕೇಂದ್ರಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಇನ್ನೊಂದು ವಿಶೇಷವೆಂದರೆ ವರದಕ್ಷಿಣೆ ಪಡೆಯದೇ ಮದುವೆ ಮಾಡಿರುವುದು” ಎಂದು ಅವರು ಹೇಳಿದ್ದಾರೆ.

- Advertisement -

ಸಂವಿಧಾನವನ್ನು ರಕ್ಷಿಸುವ ಪ್ರಮಾಣ ಮಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಾವಿತ್ರಿಬಾಯ್ ಪುಲೆ ಚಿತ್ರಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದಿರುವುದಾಗಿ ನವದಂಪತಿ ಹೇಳಿದ್ದಾರೆ. ಮದುವೆಯಲ್ಲಿ ತಮಗೆ ಸಿಕ್ಕ ಉಡುಗೊರೆಗಳನ್ನು ಪ್ರತಿಭಟನಾ ನಿರತ ರೈತರಿಗೆ ನೀಡಿ ತಮ್ಮ ಬೇಡಿಕೆ ಈಡೇರುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಅವರು ಹೇಳಿದ್ದಾರೆ.

Join Whatsapp