ಬಿಜೆಪಿ ಕಛೇರಿಯ ಲೈಬ್ರರಿಯಲ್ಲಿ ಯುವ ನಾಯಕಿಗೆ ಲೈಂಗಿಕ ಕಿರುಕುಳ

Prasthutha: March 19, 2021

ಭೋಪಾಲ : ಬಿಜೆಪಿಯ ಕಛೇರಿಯಲ್ಲಿರುವ ಲೈಬ್ರರಿಯೊಂದರಲ್ಲಿ ಪಕ್ಷದ ಯುವ ನಾಯಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯನ್ನು ಸ್ವತಃ ಯುವತಿಯೇ ವೀಡಿಯೋ ಮೂಲಕ ತಿಳಿಸಿದ್ದು, ಇದೀಗ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಾನು ಸಣ್ಣ ನಗರವೊಂದರಿಂದ ಬಿಜೆಪಿ ಮತ್ತು ದೇಶದೊಂದಿಗೆ ಇರು ಬದ್ಧತೆಯಿಂದ ಬೋಪಾಲಕ್ಕೆ ಬಂದಿದ್ದೇನೆ. ಪ್ರತಿದಿನ ಸುಮಾರು 18 ರಿಂದ 28 ಗಂಟೆ ಸಮಯವನ್ನು ಪಕ್ಷದ ಕುರಿತು ಕಲಿಯಲು ಮೀಸಲಿಡುತ್ತೇನೆ. ಅದಕ್ಕಾಗಿ ಬೋಪಾಲ ಬಿಜೆಪಿಯ ಲೈಬ್ರರಿಯಲ್ಲಿ ಕುಳಿತು ಸಮಯ ಕಳೆಯುತ್ತಿದ್ದೆ ಎಂದು ಬಿಜೆಪಿಯ ಮಹಿಳಾ ನಾಯಕಿ ವೀಡಿಯೋದಲ್ಲಿ ಹೇಳಿದ್ದಾಳೆ.

ಮಾರ್ಚ್ 12ರಂದು ಬಿಜೆಪಿ ಹಿರಿಯ ವ್ಯಕ್ತಿಯೊಬ್ಬ ನನಗೆ ಲೈಂಗಿಕ ಕಿರುಕುಳ ನೀಡಿ ತನ್ನ ಮನೆಗೆ ಬರಬೇಕೆಂದು ಒತ್ತಾಯಿಸಿದ್ದಾನೆ ಮತ್ತು ನನ್ನ ಮೋಟಾರು ಬೈಕಿನಲ್ಲಿ ಡ್ರಾಪ್ ಕೇಳಿದ್ದ ಎಂದು ಯುವತಿ ಹೇಳಿದ್ದಾಳೆ.

ಅದೇ ರೀತಿ ಇನ್ನೋರ್ವ ಯುವತಿಯೂ ಇಂತಹಾ ಕಿರುಕುಳಕ್ಕೊಳಗಾಗಿದ್ದು, ಯುವತಿಗೆ ನಿರಂತರ ಫೋನ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಯುವತಿ ತನ ಫೋನ್ ನಂಬರನ್ನೇ ಬ್ಲಾಕ್ ಮಾಡಿದ್ದಳು.

ಈ ವಿಷಯವನ್ನು ಲೈಬ್ರರಿಯ ಅಧಿಕಾರಿಗಳಿಗೆ ತಿಳಿಸಿದಾಗ ನೆರವು ನೀಡುವ ಬದಲು ತನ್ನ ಬ್ಯಾಗನ್ನು ಹೊರಗೆ ಎಸೆದು ಇನ್ನು ಲೈಬ್ರರಿಗೆ ಬರಬಾರದೆಂದು ಹೇಳಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಅದಲ್ಲದೆ ಬಿಜೆಪಿಯ ನಾಯಕನೊಬ್ಬ ಯಾವಾಗಲೂ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಯುವತಿ ಹೇಳಿದ್ದಾಳೆ.

ಯುವತಿಯ ವೀಡಿಯೋ ವೈರಲಾಗುತ್ತಿದ್ದಂತೆ ಮಾರ್ಚ್ 12 ಮತ್ತು 15ರ ನಡುವೆ ಲೈಬ್ರರಿಯ ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಬೇಕೆಂದು ಮಹಿಳಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!