ಕೊನೆಗೂ ನಿರಾಳರಾದ ಕೊಡಗು ಜನತೆ | ನರಭಕ್ಷಕ ಹುಲಿಯ ಹತ್ಯೆ, ಕಳೇಬರ ಪತ್ತೆ

Prasthutha|

ಕೊಡಗು:  ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿಯ ಕೋತೂರು ಗ್ರಾಮದ ಲಕ್ಕುಂದ ಎಂಬಲ್ಲಿ ನರಭಕ್ಷಕ ಹುಲಿಯ ಕಳೇಬರ ಇಂದು ಮಧ್ಯಾಹ್ನ ಪತ್ತೆಯಾಗುವುದರೊಂದಿಗೆ ಪೊನ್ನಂಪೇಟೆ ನಿವಾಸಿಗಳ ಆತಂಕ ನಿವಾರಣೆಯಾಗಿದೆ.

- Advertisement -

ನರಭಕ್ಷಕ ಹುಲಿಯ ಮೃತದೇಹ ಪತ್ತೆಯಾದ ಮಾಹಿತಿ ದೊರೆತಾಗಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಮತ್ತು ವನ್ಯಜೀವಿ ತಜ್ಞರು, ಜನರ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿದ್ದು ಇದೇ ಹುಲಿ ಎಂದು ಸ್ಪಷ್ಟಪಡಿಸಿದ್ದಾರೆ.


ಈ ಹುಲಿ ಈ ಹಿಂದೆ ಪೊನ್ನಂಪೇಟೆಯ ಸುತ್ತಮುತ್ತ ಮೂರು ಜನರನ್ನು ಕೊಂದಿತ್ತು. ನಂತರ ಓರ್ವನನ್ನು ಗಾಯಗೊಳಿಸಿತ್ತು. ಅಲ್ಲದೆ ಹಲವು ಜಾನುವಾರುಗಳನ್ನು ಕೊಂದು ಹಾಕಿತ್ತು. ಇದರಿಂದಾಗಿ ಆತಂಕಗೊಂಡಿದ್ದ ಸ್ಥಳೀಯರು ಕಳೆದ 20 ದಿನಗಳಿಂದ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಹುಲಿಯನ್ನು ಸೆರೆ ಹಿಡಿಯಲು ಅಥವಾ ಗುಂಡು ಹಾರಿಸಿ ಕೊಲ್ಲಲು ಅರಣ್ಯ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹುಲಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಸುಮಾರು 150 ಜನರ ತಂಡವನ್ನು ರಚಿಸಿತ್ತು. ಈ ತಂಡದಲ್ಲಿ, ಶಾರ್ಪ್ ಶೂಟರ್ ಗಳು, ಪಶುವೈದ್ಯರು ಮತ್ತು ಟ್ರ್ಯಾಕರ್‌ ಸಿಬ್ಬಂದಿಗಳನ್ನು ನಿಯೋಜಿಸಿತ್ತು. ಹುಲಿಯನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಐದು ಸೊಲಿಗಾ ಬುಡಕಟ್ಟು ಜನಾಂಗದವರ ತಂಡವನ್ನು ಸಹ ಕರೆತರಲಾಗಿತ್ತು.

Join Whatsapp