September 22, 2020

ಅಲ್ಪಸಂಖ್ಯಾತರ ಪ್ರದೇಶಗಳಿಗೆ ಕೇವಲ ಶೇ.10ರಷ್ಟು ನಿಧಿಯನ್ನು ವ್ಯಯಿಸಿದ ಯೋಗಿ ಸರಕಾರ

‘‘ಸಬ್ ಕಾ ಸಾಥ್ – ಸಬ್ ಕಾ ವಿಕಾಸ್’’

ಹೊಸದಿಲ್ಲಿ: ಅಲ್ಪಸಂಖ್ಯಾತ ಕೇಂದ್ರೀಕೃತ ಪ್ರದೇಶಗಳ ಅಭಿವೃದ್ಧಿಗೆ ಯುಪಿ ಸರಕಾರ ಬಳಸಿದ ನಿಧಿಯ ಮಾಹಿತಿಯನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರು ಬಿಡುಗಡೆ ಮಾಡಿದ್ದಾರೆ. ಇದರ ಪ್ರಕಾರ, ಕೇಂದ್ರವು ನಿಗದಿಪಡಿಸಿದ ಒಟ್ಟು ನಿಧಿಯ ಶೇ.10ಕ್ಕಿಂತ ಕಡಿಮೆ ಅಂದರೆ 16,207 ಲಕ್ಷ ರೂಪಾಯಿಯಲ್ಲಿ ಕೇವಲ 1,602 ಲಕ್ಷ ರೂ.ಅನ್ನು ಮಾತ್ರ ಈ ಪ್ರದೇಶಗಳಿಗೆ ವ್ಯಯಿಸಲಾಗಿದೆ.

 ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮದ ಅಡಿಯಲ್ಲಿ ನೀಡಲಾದ ಈ ನಿಧಿಯು ಶೇ. 25ಕ್ಕೂ ಹೆಚ್ಚು ಮುಸ್ಲಿಮ್ ಜನಸಂಖ್ಯೆನ್ನು ಹೊಂದಿರುವ 89 ಪಟ್ಟಣಗಳು ಮತ್ತು ಜಿಲ್ಲೆಗಳಲ್ಲಿನ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

 ಹಿಂದಿನ ಸರಕಾರದ ಅಡಿಯಲ್ಲಿ 32,462 ಲಕ್ಷ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ಶೇ.62ರಷ್ಟು ಹಣವನ್ನು ಸರಕಾರ ಬಳಸಿಕೊಂಡಿದೆ. ಆದರೆ 2016-17ನೇ ಸಾಲಿನಲ್ಲಿ ಕೇವಲ ಶೇ.39ರಷ್ಟು, 2017-18ರಲ್ಲಿ ಕೇವಲ ಶೇ.40ರಷ್ಟು ಮತ್ತು 2018-19ರಲ್ಲಿ ಕೇವಲ ಶೇ.31ರಷ್ಟು ನಿಧಿಯನ್ನು ಮಾತ್ರ ಬಳಸಲಾಗಿದೆ.

 ನಿಗದಿಪಡಿಸಲಾದ ಮೊತ್ತವನ್ನು ಕಡಿಮೆ ಬಳಕೆ ಮಾಡಿರುವುದು ಮಾತ್ರವಲ್ಲ, ಈ ಪ್ರದೇಶಗಳಿಗೆ ಕೇಂದ್ರವು ನಿಗದಿಪಡಿಸಿದ ಮೊತ್ತವೂ ಕಡಿಮೆಯಾಗಿದೆ. 2015-16ರಲ್ಲಿ 32,462ಲಕ್ಷ ರೂ., 2016-17ರಲ್ಲಿ 14,364 ಲಕ್ಷ ರೂ. ಮತ್ತು 2017-18ರಲ್ಲಿ 15,182 ಲಕ್ಷ ರೂಪಾಯಿಯನ್ನು ನಿಗದಿಪಡಿಸಿದೆ.

 ಮುಸ್ಲಿಮ್ ಪ್ರದೇಶಗಳಲ್ಲಿ ಮೂಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಕೂಡ ಯಾವುದೇ ಹಣವಿಲ್ಲ ಎಂದು ಅಮ್ರೋಹಾದ ಸಂಸದ ಡಾನಿಶ್ ಅಲಿ ಹೇಳಿದ್ದಾರೆ. ಅವರು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ. ‘‘ಕೇಂದ್ರವು ಅದನ್ನು ಬಿಡುಗಡೆ ಮಾಡಿದ್ದರೆ, ರಾಜ್ಯವು ಅದನ್ನು ಯಾಕೆ ತಡೆಹಿಡಿಯುತ್ತಿದೆ? ಕೇಂದ್ರವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬೇಕಾದಷ್ಟು ಹಣವನ್ನು ನಿಗದಿಪಡಿಸಬೇಕು ಮತ್ತು ಯುಪಿ ಸರಕಾರವು ಯಾವುದೇ ನಿರ್ಲಕ್ಷ್ಯ ಮತ್ತು ತಾರತಮ್ಯವಿಲ್ಲದೆ ಅವುಗಳನ್ನು ಸಂಪೂರ್ಣವಾಗಿ ಬಳಸಬೇಕು. 2019-20ರಲ್ಲಿ ನಿಧಿಯ ಬಳಕೆ ಶೇ.9.9ಕ್ಕೆ ಇಳಿದಿರುವುದರ ಬಗ್ಗೆ ನನಗೆ ಆಘಾತವಾಗಿದೆ. ನಿಧಿಯ ಹಂಚಿಕೆಯನ್ನು ಶೇ.50ಕ್ಕಿಂತ ಕಡಿಮೆಗೊಳಿಸಿದ್ದು, ರಾಜ್ಯವು ಆ ನಿಧಿಯಲ್ಲಿ ಶೇ.10ಕ್ಕಿಂತ ಕಡಿಮೆ ಹಣವನ್ನು ಬಳಸಿದೆ’’ ಎಂದು ಅವರು ಹೇಳಿದ್ದಾರೆ.

 ಯುಪಿಯಲ್ಲಿ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಕೇಂದ್ರ ನಿಗದಿಪಡಿಸಿದ ನಿಧಿಗಳ ಕಡಿಮೆ ಬಳಕೆಯು ‘‘ಸಬ್ ಕಾ ಸಬ್ ಕಾ ವಿಕಾಸ್’’ ಭರವಸೆಯ ಹೊರತಾಗಿಯೂ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!