ತಾಲಿಬಾನ್ ಮೇಲೆ ಅಮೆರಿಕ ಬಾಂಬ್ ದಾಳಿಯನ್ನು ದೇವರ ಶಿಕ್ಷೆ ಎಂದ ಯೋಗಿ ಆದಿತ್ಯನಾಥ್ !

Prasthutha|

ಉತ್ತರ ಪ್ರದೇಶ: ತಾಲಿಬಾನ್ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದು ದೇವರ ಶಿಕ್ಷೆ ಎಂದಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಮಾಡಲಾಗಿತ್ತು, ಇದಕ್ಕಾಗಿ ತಾಲಿಬಾನ್ ಮೇಲೆ ಅಮೆರಿಕಾ ಬಾಂಬ್ ದಾಳಿ ನಡೆಸಿದೆ. ಇದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಯೋಗಿ ಹೇಳಿದ್ದಾರೆ.

- Advertisement -

ಲಕ್ನೋದಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅಫ್ಘಾನಿಸ್ತಾನದ ಬಾಮಿಯಾನ್ ನಲ್ಲಿ ಸುಮಾರು 20 ವರ್ಷಗಳ ಹಿಂದೆ ತಾಲಿಬಾನಿಗಳು 2,500ಗಳ ಇತಿಹಾಸವಿದ್ದ ಪುರಾತನ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು, ಇದರ ವಿರುದ್ಧ ದು ಅಮೆರಿಕಾ ಸೇಡು ತೀರಿಸಿದೆ ಎಂದರು.

ಅಹಿಂಸೆ, ಸಂದೇಶ ಶಾಂತಿ, ಸಹೋದರತ್ವವನ್ನು ಪ್ರತಿಪಾದಿಸುತ್ತಿದ್ದ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸದ್ದಕ್ಕಾಗಿ ದೇವರು ಈ ರೀತಿ ಶಿಕ್ಷೆ ನೀಡಿದ್ದಾನೆ. ಬುದ್ಧ ಎಂದಿಗೂ ಯುದ್ಧ ಮಾಡಲು ಕರೆಕೊಡಲಿಲ್ಲ, ಆತ ಎಂದಿಗೂ ಮಾನವೀಯತೆಗೆ ಸ್ಫೂರ್ತಿಯ ಮೂಲ ಮತ್ತು ಭಕ್ತಿಯ ಕೇಂದ್ರವಾಗಿರುತ್ತಾನೆ ಎಂದು ಅವರು ಹೇಳಿದ್ದಾರೆ.

Join Whatsapp