ಕೋವಿಡ್ ಮೂರನೇ ಅಲೆ ಭೀತಿ | ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬದಲಾವಣೆಗೆ ಸಿದ್ಧತೆ

Prasthutha|

ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ಬಹುತೇಕ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಾರೀ ಬದಲಾವಣೆಗೆ ಪಿಯು ಬೋರ್ಡ್ ಸಿದ್ಧತೆ ನಡೆಸಿದೆ. ವಾರ್ಷಿಕ ಪರೀಕ್ಷೆ ರೀತಿಯಲ್ಲೇ  ಮಧ್ಯವಾರ್ಷಿಕ ಪರೀಕ್ಷೆ ಆಯೋಜನೆ ಮಾಡಲು ಪಿಯು ಬೋರ್ಡ್ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಸಿಬಿಎಸ್ ಸಿ, ಐಸಿಎಸ್ ಇ ರೀತಿಯಲ್ಲೇ ಈ ಬಾರಿಯ ದ್ವಿತೀಯ ಪರೀಕ್ಷೆ ನಡೆಸಲು ಪಿಯು ಮಂಡಳಿ ಮುಂದಾಗಿದೆ.

- Advertisement -

ಈ ಮೊದಲು ಮಧ್ಯ ವಾರ್ಷಿಕ ಪರೀಕ್ಷೆಗಳ ಪ್ರಶ್ನೆಪತ್ರಿಗಳು  ಜಿಲ್ಲಾ ಮಟ್ಟದಲ್ಲಿ ತಯಾರಿ ಮಾಡಲಾಗುತ್ತಿತ್ತು. ಕಾಲೇಜು ಮಟ್ಟದಲ್ಲಿಯೇ ಪರೀಕ್ಷೆಯ ಮೌಲ್ಯಮಾಪನಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಪಿಯು ಬೋರ್ಡ್ ಮಧ್ಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಿದ್ದು, ಮಧ್ಯ ವಾರ್ಷಿಕ ಪರೀಕ್ಷೆಗಳು ನವೆಂಬರ್ 29 ರಿಂದ ಡಿಸೆಂಬರ್ 10ರವರೆಗೆ ನಡೆಸಲು ತೀರ್ಮಾನಿಸಿದೆ.

ಕಳೆದ ಅವಧಿಯಲ್ಲಿ ಕೊರೊನಾ ಕರಿಛಾಯೆ ದ್ವಿತೀಯ ಪಿಯುಸಿ ಮತ್ತು SSLC ಪರೀಕ್ಷೆಗಳ ಮೇಲೆ ಬೀರಿತ್ತು. ವಿದ್ಯಾರ್ಥಿಗಳಿಗೆ ಅಂಕ ನೀಡುವ ಬಗ್ಗೆಯೂ ಗೊಂದಲ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಿಯು ಮಂಡಳಿಯು ಈ ಅವಧಿಯ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.  ಕೊರೊನಾ ಮೂರನೇ ಅಲೆಯ ಕಾರಣದಿಂದ ಪರೀಕ್ಷೆ ರದ್ದುಗೊಂಡರೆ ಮಧ್ಯ ವಾರ್ಷಿಕದ ಅಂಕಗಳನ್ನು ವಾರ್ಷಿಕ ಪರೀಕ್ಷೆ ಅಂಕಗಳಿಗೆ ಹೊಂದಾಣಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

Join Whatsapp