ಯಾಂಬೂ: ISF ನಿಂದ “ಗಣರಾಜ್ಯ ವನ್ನು ಉಳಿಸಿ” ಸಾರ್ವಜನಿಕ ಸಭೆ

Prasthutha|

ಸೌದಿ ಅರೇಬಿಯ, ಯಾಂಬೂ: ಇಂಡಿಯನ್ ಸೋಶಿಯಲ್ ಫೋರಮ್ ಯಾಂಬೂ ವಲಯದ ವತಿಯಿಂದ 75ನೇ ಭಾರತ ಗಣರಾಜ್ಯದ ಭಾಗವಾಗಿ, “ಗಣರಾಜ್ಯವನ್ನು ಉಳಿಸಿ” ಅಭಿಯಾನದ ಅಂಗವಾಗಿ ಸಾರ್ವಜನಿಕ ಸಭೆಯು ದಿನಾಂಕ 10/03/2022, ಗುರುವಾರ ಯಾಂಬೂವಿನಲ್ಲಿ ನಡೆಯಿತು.

- Advertisement -

ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಕೇಂದ್ರ ಸಮಿತಿ ಸದಸ್ಯ ಹಕೀಮ್ ದಿಕ್ಸುಚಿ ಭಾಷಣ ಮಾಡಿ ಪ್ರಸಕ್ತ ಭಾರತದ ನೈಜ ಚಿತ್ರಣವನ್ನು ನೆರೆದವರಿಗೆ ವಿವರಿಸಿದರು.

ಹಿಂದುತ್ವ ಶಕ್ತಿಗಳು ದೇಶವನ್ನು ಮತ್ತು ಸಂವಿಧಾನವನ್ನು ಬುಡಮೇಲು ಮಾಡುತ್ತಾ ಅಪಾಯದ ಅಂಚಿಗೆ ಕೊಂಡೊಯುತ್ತಿದೆ ಅಂದರು. ದಿನಪ್ರತಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ದುಸ್ತರ ವಾಗಿದೆ, ಆದರೂ ಭಾವನಾತ್ಮವಾಗಿ ಮುಗ್ದ ಜನರನ್ನು ಕೆರಳಿಸಿ ಮಂದಿರದ ಮತ್ತು ಮುಸ್ಲಿಂ ದ್ವೇಷವನ್ನು ಬಿತ್ತಿ ಪುನಃ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೇರಿರುವುದು ಪಂಚ ರಾಜ್ಯ ಚುನಾವಣೆಗಳೇ ಸಾಕ್ಷಿ ಎಂದು ಅವರು ಸಾಂದರ್ಭಿಕವಾಗಿ ನುಡಿದಿದ್ದಾರೆ.

- Advertisement -

ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಶೌಕತ್ ಪಶ್ಚಿಮ ಬಂಗಾಳ , ಸೆಯ್ಯದ್ ಅಲಿ ಮತ್ತು ಕರ್ನಾಟಕ ಮುಸ್ಲಿಂ ಅಸೋಸಿಯೇಷನ್ ಸ್ಥಾಪಕರಾದ ಜವಾದ್ ರಹ್ಮಾನ್ ಆಗಮಿಸಿದ್ದರು.

ನೂರಾರು ಅನಿವಾಸಿ ಭಾರತೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.

ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷರಾದ ಶಾದಾಬ್ ಉತ್ತರಪ್ರದೇಶ ಸ್ವಾಗತಿಸಿದರು. ವಾಸೀಮ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದ್ದಾರೆ.

Join Whatsapp