ಬೆಂಗಳೂರು : ಇತ್ತೀಚೆಗೆ ತಮ್ಮ ಮಗ ಬಿ.ವೈ.ವಿಜೇಂದ್ರ ಆಡಳಿತದಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಎಂಬ ಆರೋಪವನ್ನು ತಿರಸ್ಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೊಂದಲಕ್ಕೆ ಕಾರಣವಾಗುವಂತೆ ಅನಗತ್ಯವಾಗಿ ನನ್ನ ಮಗನ ಹೆಸರನ್ನು ತರಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿಯೊಂದಿಗಿನ ಇತ್ತೀಚಿನ ಭೇಟಿಯ ನಂತರ ಯಾವುದೇ ಬೆಂಬಲವನ್ನು ನೀಡುವ ಅಥವಾ ಜೆಡಿಎಸ್ ರಾಜ್ಯ ಸರಕಾರಕ್ಕೆ ಸೇರ್ಪಡೆಗೊಳ್ಳುವ ವದಂತಿಗಳನ್ನು ಮುಖ್ಯಮಂತ್ರಿ ತಳ್ಳಿಹಾಕಿದರು. ‘‘ಬೆಳೆಯುತ್ತಿರುವವರನ್ನು ನೋಡಲು ಜನರಿಂದ ಸಹಿಸಲಾಗುವುದಿಲ್ಲ ಎಂಬುದು ಸಹಜ. ವಿಜಯೇಂದ್ರ ಯಾವುದೇ ಕ್ಷಣದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
‘‘ಕೆಲವರು ಅನಗತ್ಯವಾಗಿ ವಿಜಯೇಂದ್ರರ ಹೆಸರನ್ನು ತಂದು ಗೊಂದಲ ಸಷ್ಟಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ’’ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ 120 ಕೋಟಿ ರೂ. ವೆಚ್ಚದಲ್ಲಿ ನವದೆಹಲಿಯಲ್ಲಿ ಕರ್ನಾಟಕ ಭವನ-1 ‘ಕಾವೇರಿ’ ಪುನರ್ನಿರ್ಮಾನಕ್ಕೆ ಅಡಿಪಾಯ ಹಾಕಿದ ನಂತರ ಹೇಳಿದರು. ಇತ್ತೀಚೆಗೆ ವಿಜಯೇಂದ್ರ ಅವರ ಸರಕಾರಿ ವೈದ್ಯಕೀಯ ಅಧಿಕಾರಿಗಳೊಂದಿಗಿನ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಯಾವುದೇ ಸಾಂವಿಧಾನಿಕ ಸ್ಥಾನವನ್ನು ಹೊಂದಿರದ ಅವರಿಗೆ ಅಂತಹ ಸಂವಹನಕ್ಕಾಗಿ ಯಾರು ಅಧಿಕಾರ ನೀಡಿದರು ಎಂದು ಪ್ರಶ್ನಿಸಿದೆ.
2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ವಿಜಯೇಂದ್ರನ ಹಸ್ತಕ್ಷೇಪದ ಆರೋಪವನ್ನು ಯಡಿಯೂರಪ್ಪ ತಿರಸ್ಕರಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಇತ್ತೀಚೆಗಿನ ಭೇಟಿಯ ಬಗ್ಗೆ ಕೇಳಿದಾಗ,‘‘ಪ್ರತಿಪಕ್ಷದ ನಾಯಕ ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ತಮ್ಮ ಗಹ ಕಚೇರಿಗೆ ಬಂದಿದ್ದರು. ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚಿಸಲಾಗಿಲ್ಲ, ಅದರ ಅಗತ್ಯವಿಲ್ಲ. ನಮಗೆ ಬಹುಮತವಿದೆ ಮತ್ತು ಉಳಿದ ಮೂರು ವರ್ಷಗಳಲ್ಲಿ ಸ್ಥಿರ ಸರಕಾರವನ್ನು ನೀಡುತ್ತೇವೆ’’ ಎಂದು ಮುಖ್ಯಮಂತ್ರಿ ಹೇಳಿದರು.