ಯುಪಿಯಲ್ಲಿ ಅಂಗವಿಕಲನನ್ನು ಥಳಿಸಿದ ಪೋಲೀಸ್ ಸಿಬ್ಬಂದಿ

Prasthutha|

ಲಕ್ನೋ : ಯುಪಿಯಲ್ಲಿ ಅಂಗವಿಕಲನನ್ನು ಪೋಲೀಸ್ ಸಿಬ್ಬಂದಿಯೊಬ್ಬ ಹಿಡಿದೆಳೆದು ಥಳಿಸಿರುವುದು ವರದಿಯಾಗಿದೆ. ಅಂಗವಿಕಲನಿಗೆ ಥಳಿಸಿದ ಕನೌಜ್ ಪೋಲೀಸ್ ಸ್ಟೇಷನ್ ನ ಕಾನ್ಸ್ಟೇಬಲ್ ನನ್ನು ಜಿಲ್ಲಾ ಪೋಲೀಸ್ ಮುಖ್ಯಸ್ಥರು ಅಮಾನತುಗೊಳಿಸಿದ್ದಾರೆ. ಆತನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಪೋಲೀಸ್ ಠಾಣೆ ಎದುರು ಇತರ ಪೋಲೀಸರು ನೋಡುತ್ತಿರುವಾಗಲೇ ಅಂಗವಿಕಲನ ಮೇಲೆ ಹಲ್ಲೆ ಮಾಡಲಾಗಿದೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಅವನ ತಲೆಯ ಹಿಂಬಾಗದಿಂದ ಥಳಿಸಿ ಕೆಳಗೆ ತಳ್ಳುತ್ತಿರುವ ದೃಶ್ಯ ವೀಡಿಯೋದಲ್ಲಿ ಕಾಣುತ್ತಿದೆ.

- Advertisement -

ತನ್ನ ಇ- ರಿಕ್ಷಾಗೆ ರಸ್ತೆಯ ಬದಿಯಲ್ಲಿ ಜನರನ್ನು ಹತ್ತಿಸಿದ್ದಕ್ಕಾಗಿ ನನ್ನನ್ನು ಥಳಿಸಲಾಗಿದೆ ಎಂದು ಅಂಗವಿಕಲನು ಹೇಳಿದ್ದಾನೆ. ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಜನರನ್ನು ಹತ್ತಿಸುವಂತೆ ಹೇಳಿದಾಗ ಅಟೋ ಚಾಲಕ ನನ್ನ ಬಳಿ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಥಳಿಸಿರುವುದಾಗಿ ಪೋಲೀಸ್ ಸಿಬ್ಬಂದಿ ತಿಳಿಸಿದ್ದಾನೆ.

- Advertisement -