‘ನೀವು ಭಾರತದಲ್ಲಿ ವಾಸಿಸಲು ಅರ್ಹರಲ್ಲ’ : ತಬ್ಲೀಗಿಗಳ ವಿರುದ್ಧ ಹಿಂದುತ್ವ ದುಷ್ಕರ್ಮಿಗಳಿಂದ ಹಲ್ಲೆ!

Prasthutha|

ಮುಂಬೈ : “ತುಮ್ ಹಿಂದುಸ್ಥಾನ್ ಮೇ ರೆಹ್ನೇಕೇಲಿಯೆ ಲಾಯಕ್ ನಹೀ ಹೋ, ತುಮ್ ಯಹಾಂ ನಹೀ ರೆಹ್ ಸಕ್ತಾ”  ಸೆಪ್ಟಂಬರ್ 16ಕ್ಕೆ ರಾತ್ರಿ ಮಹಾರಾಷ್ಟ್ರದ ಬೀಡ್ಸ್ ಹೋಲ್ ಗ್ರಾಮದಲ್ಲಿ ಅವರು ನಮಗೆ ಥಳಿಸುವಾಗ ಹೀಗೆ ಘೋಷಣೆ ಕೂಗಿದರು. ಸ್ನೇಹಿತನ ಅಂತ್ಯಕ್ರಿಯೆಗೆ ದಾರೂರಿನಿಂದ ಅಂಬಜೋಗೈ ಗ್ರಾಮಕ್ಕೆ ಹೋಗುವಾಗುವಾಗ ಹಿಂದುತ್ವವಾದಿಗಳಿಂದ ಕಿರುಕುಳಕ್ಕೊಳಗಾದ  ತಬ್ಲೀಗಿಗಳ ಮಾತು ಇದು. ಸುಹೈಲ್ ತಂಬೋಳಿ, ಅಸ್ಲಂ ಆತರ್, ಸಯ್ಯಿದ್ ಲಯಿಕ್, ನಿಝಾಮುದ್ದೀನ್ ಖಾಝಿ, ಹಿಂದುತ್ವವಾದಿಗಳ ಕ್ರೂರ ದಾಳಿಗೊಳಗಾದವರು. ಹೋಗುವ ದಾರಿಯಲ್ಲಿ ನೀರಿಗಾಗಿ ಕಾರು ನಿಲ್ಲಿಸಿದಾಗ ಇಬ್ಬರು ಬೈಕಿನಲ್ಲಿ ಬಂದರು, ಅವರು ಯಾವುದೇ ಕಾರಣವಿಲ್ಲದೆ ಧರ್ಮವನ್ನು ನಿಂದಿಸಲು ಪ್ರಾರಂಭಿಸಿದರು. ಸಮಸ್ಯೆ ಸೃಷ್ಟಿಸದೆ ಅಲ್ಲಿಂದ ಹೊರಡಲು ಪ್ರಯತ್ನಿಸಿದ ಕೆಲವೇ ನಿಮಿಷಗಳಲ್ಲಿ ಇನ್ನೂ ಆರು ಮಂದಿ ದೊಣ್ಣೆಗಳೊಂದಿಗೆ ಬಂದರು. ಅವರಲ್ಲೊಬ್ಬ ನನ್ನ ತಲೆಗೆ ಇಟ್ಟಿಗೆಯಿಂದ ಬಡಿದು. ಬೆತ್ತ ಮುರಿಯುವವರೆಗೂ ಹೊಡೆಯುತ್ತಿದ್ದ ಎಂದು 34 ವರ್ಷದ ಸುಹೈಲ್ ತಂಬೋಳಿ ಹೇಳುತ್ತಾರೆ.

- Advertisement -

“ಅವರು ಖಂಡಿತವಾಗಿಯೂ ಆ ರಾತ್ರಿ ನಮ್ಮನ್ನು ಕೊಲ್ಲುವ ಉದ್ದೇಶ ಹೊಂದಿದ್ದರು, ಅವರು ನಮ್ಮ ಗಡ್ಡವನ್ನು ಕಿತ್ತು ನಮ್ಮ ಟೊಪ್ಪಿಯನ್ನು ಎಸೆದರು. ಅವರು ನಲ್ವತ್ತು ನಿಮಿಷಗಳವರೆಗೆ ಥಳಿಸುತ್ತಲೇ ಇದ್ದರು. ಅವರು ಯಾಕಾಗಿ ನಮಗೆ ಥಳಿಸುತ್ತಿದ್ದಾರೆ ಎಂದು ನಮಗೆ ಅರ್ಥವಾಗಲಿಲ್ಲ”. ಹಲ್ಲೆಯ ಬಗ್ಗೆ ಮಾತನಾಡುವಾಗ ಸೈಯದ್ ಲೈಕ್ ನಿಗೆ ಇನ್ನೂ ಅದರ ಕಾರಣಗಳು ತಿಳಿದಿಲ್ಲ. ಆಕ್ರಮಣದ ಸಮಯದಲ್ಲಿ ನಾವು ನೆಲಕ್ಕೆ ಬಿದ್ದೆವು. ಅವರು ಎದೆ ಮತ್ತು ತಲೆಯ ಮೇಲೆ ನಿರಂತರವಾಗಿ ಥಳಿಸುತ್ತಿದ್ದರು. ಆ ನಂತರ ನಾನು ಮೂರ್ಛೆ ಹೋದೆ ಎಂದು ಚಿತ್ರಹಿಂಸೆ ಕಾರಣ ಪ್ರಜ್ಞೆ ಕಳೆದುಕೊಂಡ  ಸುಹೇಲ್ ಹೇಳಿದರು. ಒಂದು ಗಂಟೆಯ ನಂತರ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದರು. 

ವಾಡ್ಗಾಂವ್ ಪೋಲೀಸ್ ಠಾಣೆಯಲ್ಲಿ 307(ಕೊಲೆ ಯತ್ನ), 324( ಸಶಸ್ತ್ರ ಹಲ್ಲೆ), 323( ಸ್ವಯಂ ಪ್ರೇರಿತ ಹಲ್ಲೆ), 147(ಗಲಭೆಗೆ ಯತ್ನ) ಮತ್ತು 148 ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳಾದ ನಾರಾಯಣ್ ಧನರಾಜ್ ಗುಗೆ ಮತ್ತು ರಾಹುಲ್ ತುಕಾರಾಂ ಗುಗೆ ಅವರನ್ನು ಬಂಧಿಸಲಾಗಿದೆ ಎಂಧು ವಾಡ್ಗಾಂವ್ ಪೋಲೀಸ್ ಠಾಣೆಯಲ್ಲಿ ಎಪಿಐ ಆನಂದ್ ಸೋಟ್ ತಿಳಿಸಿದ್ದಾರೆ.

Join Whatsapp