ವಿಶ್ವ ವೈದ್ಯರ ದಿನಾಚರಣೆ| ಪಾವೂರು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನಾ ಕಾರ್ಯಕ್ರಮ

Prasthutha|

ಮಂಗಳೂರು: ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ದೇಶದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಸೋಂಕಿನ ವಿರುದ್ಧ ತಮ್ಮ ಜೀವವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಪಾವೂರು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

 ಕೋವಿಡ್ ಮಹಾಮಾರಿ ತಡೆಯಲು ಇಡೀ ದೇಶದಲ್ಲಿ ವೈದ್ಯರು ಸೇರಿದಂತೆ ಹಲವಾರು ಜನ ನಿರಂತರ ಶ್ರಮಿಸಿದ್ದಾರೆ. ತಮ್ಮ ಕುಟುಂಬವನ್ನು ಲೆಕ್ಕಿಸದೆ ಅದೆಷ್ಟೋ ವೈದ್ಯರು ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಅದೇ ರೀತಿ ಕೊರೋನ ಮುಕ್ತ ಗ್ರಾಮವನ್ನಾಗಿಸಲು ಹಗಲಿರುಳು ಸೇವೆಗೈದ ಪಾವೂರು ಗ್ರಾಮದ ವೈದ್ಯಾಧಿಕಾರಿ ಡಾ.ಸುನೀತಾ ಬೋಳಿಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಾಕ್ಟರ್ ರೇಖಾ ಪಶುವೈದ್ಯಾಧಿಕಾರಿ ಪಾವೂರು ಗ್ರಾಮ ಇವರನ್ನು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಪಾವೂರು ಗ್ರಾಮ ಪಂಚಾಯತ್ ವತಿಯಿಂದ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಮರುನ್ನೀಸ ನೌಫಲ್, ಉಪಾಧ್ಯಕ್ಷ ಅನ್ಸಾರ್ ಇನೋಳಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿ, ಆಶಾ ಕಾರ್ಯರ್ತೆಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು  SDPI ಗ್ರಾಮ ಸಮಿತಿ ಅಧ್ಯಕ್ಷ ಕಮರ್ ಮಲಾರ್ ಉಪಸ್ಥಿತರಿದ್ದರು.

- Advertisement -