ವಿಶ್ವ ಹವಾಮಾನ ಶೃಂಗಸಭೆ ಭಾನುವಾರದಿಂದ ಆರಂಭ; 90 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆ

Prasthutha|

ರೋಮ್: ವಿಶ್ವ ಹವಾಮಾನ ಶೃಂಗಸಭೆ (ಸಿಒಪಿ-27) ವಿಶ್ವಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಆರಂಭವಾಗಲಿದೆ. ಈ ಶೃಂಗಸಭೆಯು ನವೆಂಬರ್ 6 ರಿಂದ 18 ರವರೆಗೆ ಈಜಿಪ್ಟ್ ನ ಶಾಮ್ ಎಲ್-ಶೇಖ್ ನಲ್ಲಿ ನಡೆಯಲಿದೆ.

- Advertisement -


ಉದ್ಘಾಟನಾ ಅಧಿವೇಶನ ಭಾನುವಾರ ನಡೆಯಲಿದ್ದು, ನವೆಂಬರ್ 7, 8 ರಂದು ಹವಾಮಾನ ಅನುಷ್ಠಾನ ಶೃಂಗಸಭೆ ಮತ್ತು ನವೆಂಬರ್ 15 ರಿಂದ 18 ರವರೆಗೆ ಸಚಿವರ ಸಮಾವೇಶ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿದೆ.


ಈ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ 90 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸಿಒಪಿ -27 ಗೆ 18 ಸದಸ್ಯರ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

- Advertisement -


ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಮಾಡಲಿದ್ದೇವೆ ಎಂದು 2015ರಲ್ಲಿ ಪ್ಯಾರಿಸ್ ಮಾಡಿದ್ದ ಘೋಷಣೆಯನ್ನು ಅಸ್ತಿತ್ವಕ್ಕೆ ತರಲು ಶೃಂಗಸಭೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಸದಸ್ಯ ರಾಷ್ಟ್ರಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ತಮ್ಮ ಪ್ರತಿಜ್ಞೆಯನ್ನು ನವೀಕರಿಸಲಿವೆ. 2021 ರಲ್ಲಿ ಸ್ಕಾಟ್ ಲೆಂಡ್ ನ ಗ್ಲ್ಯಾಸ್ಗೋದಲ್ಲಿ ಈ ಶೃಂಗಸಭೆ ನಡೆದಿತ್ತು. ಮುಂದಿನ ಶೃಂಗಸಭೆಯು 2023 ರಲ್ಲಿ ಯುಎಇಯಲ್ಲಿ ನಡೆಯಲಿದೆ.

Join Whatsapp