ಟ್ವಿಟರ್ ನ ಬರೊಬ್ಬರಿ ಅರ್ಧಕ್ಕರ್ಧ ಉದ್ಯೋಗಿಗಳನ್ನು ವಜಾ ಮಾಡಿದ ಮಸ್ಕ್

Prasthutha|

ಸ್ಯಾನ್ ಫ್ರಾನ್ಸಿಸ್ಕೋ: ಇಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ ಬಳಿಕ ಹಲವು ಬದಲಾವಣೆಗೆ ಮುಂದಾಗಿದ್ದು, ಶೇ 50 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ವಿಶ್ವಾದಾದ್ಯಂತ ಟ್ವಿಟರ್ ನಲ್ಲಿ ಸುಮಾರು 7500 ಉದ್ಯೋಗಿಗಳು ಇದ್ದು, ಈ ಪೈಕಿ ಶೇ 50 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಕಂಪನಿ ಘೋಷಣೆ ಮಾಡಿದ ಮರುದಿನವೇ ಸುಮಾರು 4000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾನ್ ಮಸ್ಕ್, ‘ಕಂಪನಿಯು ದಿನಕ್ಕೆ ನಾಲ್ಕು ಮಿಲಿಯನ್ ಡಾಲರ್ ಗಿಂತ ಹೆಚ್ಚು ನಷ್ಟ ಅನುಭವಿಸುತ್ತಿದ್ದು, ಕೆಲಸ ಕಡಿತ ಮಾಡದೇ ಬೇರೆ ಮಾರ್ಗವೇ ಇರಲಿಲ್ಲ’ ಎಂದು ಹೇಳಿದ್ದಾರೆ.

Join Whatsapp