ಮಾನವನ ಮೆದುಳಿಗೆ ಚಿಪ್ ಅಳವಡಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭ: ಎಲಾನ್ ಮಸ್ಕ್

Prasthutha|

ಸ್ಯಾನ್ ಫ್ರಾನ್ಸಿಕೋ : ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್ ಹಾಗೂ ಮೊಬೈಲ್’ನೊಂದಿಗೆ ನೇರ ಸಂವಹನ ನಡೆಸಲು ಸಹಾಯ ಮಾಡುವಂತಹ  ಚಿಪ್ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

- Advertisement -

ಎಲಾನ್ ಮಸ್ಕ್ ಒಡೆತನದ ‘ನ್ಯೂರಾಲಿಂಕ್’ ಎನ್ನುವ ಕಂಪನಿ ಇಂಥಹದ್ದೊಂದು ಸಾಧನ ತಯಾರಿಸಿದ್ದು, ಆಲೋಚನೆಗಳ ಮೂಲಕ ಮನುಷ್ಯರು ನೇರವಾಗಿ ಕಂಪ್ಯೂಟರ್ ಅಥವಾ ಮೊಬೈಲ್’ನೊಂದಿಗೆ ಸಂವಹನ ಮಾಡಬಹುದಾಗಿದೆ.

ಈ ಸಾಧನದ ಬಳಕೆಗೆ ಅನುಮತಿ ಕೋರಿ ಎಲ್ಲಾ ದಾಖಲೆಗಳನ್ನು ಎಫ್ ಡಿಎಗೆ (ಅಮೆರಿಕದ ಆಹಾರ ಹಾಗೂ ಔಷಧಿ ಪ್ರಾಧಿಕಾರ) ಸಲ್ಲಿಸಲಾಗಿದೆ. ಬಹುಶಃ ಇನ್ನು ಆರು ತಿಂಗಳಲ್ಲಿ ಮನುಷ್ಯರ ತಲೆಯಲ್ಲಿ ಮೊದಲ ಚಿಪ್ ಅಳವಡಿಕೆಯಾಗಲಿದೆ. ನಾನು ಕೂಡ ಈ ಚಿಪ್ ಅನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಮಸ್ಕ್ ಹೇಳಿದ್ದಾರೆ.

- Advertisement -

ಈಗಾಗಲೇ ಪ್ರಾಣಿಗಳ ಮೇಲೆ ಈ ಪ್ರಯೋಗ ನಡೆಸಿದ್ದು, ನಾಣ್ಯ ಗಾತ್ರದ ಈ ಸಾಧನವನ್ನು ಮಂಗಗಳ ತಲೆ ಬುರುಡೆಯಲ್ಲಿ ಅಳವಡಿಸಲಾಗಿತ್ತು. ಅವುಗಳು ನ್ಯೂರಾಲಿಂಕ್ ಸಾಧನದ ಮೂಲಕ ವಿಡಿಯೋ ಗೇಮ್ ಆಡುವುದು ಕಂಡು ಬಂದಿತ್ತು.

ಇದೀಗ ಮಾನವನ ಮೇಲೆ ಪ್ರಯೋಗಕ್ಕೆ ಮುಂದಾಗಿದ್ದು, ಆರಂಭಿಕ ಹಂತದಲ್ಲಿ ಅಂಗವಿಕಲರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೈಗಳ ಮೂಲಕ ಬಳಸುವುದಕ್ಕಿಂತ ವೇಗವಾಗಿ ಈ ಸಾಧನದ ಮೂಲಕ ಮೊಬೈಲ್ ಆಪರೇಟ್ ಮಾಡಬಹುದು ಎಂದು ಮಸ್ಕ್ ಹೇಳಿದ್ದಾರೆ.

Join Whatsapp