ಬಿಜೆಪಿ ನಾಯಕನಿಂದ ಗುಂಡೇಟು ತಿಂದಿದ್ದ ಮಹಿಳೆ ಮೃತ್ಯು

Prasthutha|

ಜಬಲ್ಪುರ: ಬಿಜೆಪಿ ನಾಯಕನಿಂದ ಗುಂಡೇಟು ತಿಂದಿದ್ದ 26 ವರ್ಷದ ಮಹಿಳೆ ಮೃತಪಟ್ಟ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

- Advertisement -

ಜೂನ್ 16ರಂದು ಮಹಿಳೆಯು ಆರೋಪಿಯನ್ನು ಭೇಟಿಯಾಗಲು ಕಚೇರಿಗೆ ಹೋಗಿದ್ದಾಗ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಆರಂಭದಲ್ಲಿ ತನಿಖೆಯ ದಾರಿಯನ್ನು ತಪ್ಪಿಸಲು ಯತ್ನಿಸಿದ್ದ ಪೊಲೀಸರು ಗುಂಡು ಆಕಸ್ಮಿಕವಾಗಿ ಸಿಡಿದಿತ್ತು ಎಂದು ತಿಳಿಸಿದ್ದರು. ಗುಂಡು ಹಾರಾಟ ನಡೆದ ನಾಲ್ಕು ದಿನಗಳ ಬಳಿಕ ಜೂನ್ 19ರಂದು ಪೊಲೀಸರು ಆರೋಪಿಯ ವಿರುದ್ಧ ಕೊಲೆಯತ್ನ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರೊಬ್ಬರು ಆರೋಪಿಸಿದ್ದಾರೆ.