ನಾಗರೀಕ ಸಂಸ್ಥೆಗಳ ತಂಡದಿಂದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು

Prasthutha|

ಬೆಂಗಳೂರು: ಸಾಮಾಜಿಕ ಕಾಳಜಿಯುಳ್ಳ ನಾಗರಿಕರು ಹಾಗೂ ನಾಗರೀಕ ಸಂಸ್ಥೆಗಳ ತಂಡವೊಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಕರ್ನಾಟಕ ಬಿಜೆಪಿ ವಿರುದ್ಧ ದೂರು ಸಲ್ಲಿಸಿದೆ.

- Advertisement -

ಬಿಜೆಪಿ ಕರ್ನಾಟಕ ತನ್ನ ಅಧಿಕೃತ X ಪ್ಲಾಟ್ಫಾರಂನಲ್ಲಿ ಹಾಗೂ ದಿನಪತ್ರಿಕೆಯಲ್ಲಿ ನೀಡಿದ ಜಾಹಿರಾತುಗಳ ಮೂಲಕ ಸುಳ್ಳು ಸುದ್ದಿ ಹಾಗೂ ದ್ವೇಷವನ್ನು ಹಬ್ಬಿಸುವ ಮೂಲಕ ಚುನಾವಣಾ ಕಾನೂನು, ಮಾದರಿ ನೀತಿ ಸಂಹಿತೆ, IPC 153(A(, 505(1)(C), 505(2) ಉಲ್ಲಂಘಿಸಿರುವವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಬಿಜೆಪಿ ಕರ್ನಾಟಕ ತನ್ನ X handle ನಲ್ಲಿ ಹಾಕಿದ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ SC/ST ಹಾಗೂ OBC ಸಮುದಾಯಗಳ ಪಾಲಿನ ಫಂಡ್ಸ್ ಅನ್ನು ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡಿ, ಈ ಸಮುದಾಯಗಳನ್ನು ಹೊರತಳ್ಳುವಂತೆ ಬಿಂಬಿಸಿದೆ. ಇಡೀ ವೀಡಿಯೊ ಮುಸ್ಲಿಂ ಸಮುದಾಯವನ್ನು “ಕೆಟ್ಟದು” ಹಾಗೂ ಇತರೆ ಸುಂದಾಯಗಳಿಗೆ ಹಾನಿ ಮಾಡುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

ಅದೇ ರೀತಿ ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡುವಂತೆ ಹಾಗೂ SC/ST, OBC ಸಮುದಾಯಗಳ ಮೀಸಲಾತಿ ಕಿತ್ತುಹಾಕಲು ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಹೇಳಲಾಗಿದೆ. ಇದು ಸಹ ಸುಳ್ಳು ಸುದ್ದಿಯಾಗಿದೆ. ಸಂವಿಧಾನದ ಕಲಂ 15(4) ರ ಪ್ರಕಾರ , ಮೀಸಲಾತಿಯನ್ನು ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಬಹುದು ಎಂದಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ಮಾನ್ಯ ಶ್ರೀ ದೇವೇಗೌಡರ ಸರಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿತ್ತು. ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ ದೇಶದಲ್ಲೇ ಎಲ್ಲೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ. ನೀಡುವದಾಗಿ ಕಾಂಗ್ರೆಸ್ ಪಕ್ಷವೂ ಸಹ ಎಲ್ಲೂ ತಿಳಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಂದುವರೆದು, ಬಿಜೆಪಿ ಕರ್ನಾಟಕ ಧರ್ಮವನ್ನು ಉಪಯೋಗಿಸಿ ಮತಗಳನ್ನು ಕೇಳಿ, Representation of People’s Act, 1951 ನ ಕಲಂ (3A) ಯನ್ನು ಉಲ್ಲಂಘಿಸಿದೆ. ಜೊತೆಗೆ ಮುಸ್ಲಿಂ ಸಮುದಾಯ ಹಾಗೂ SC/ST, OBC ಸಮುದಾಯಗಳ ಮಧ್ಯೆ ದ್ವೇಷವನ್ನು ಹಬ್ಬಿಸಲು ಹೊರಟಿದೆ ಎಂದು. Xನಲ್ಲಿರುವ ವಿಡಿಯೋ ಹಾಗೂ ಜಾಹಿರಾತು ಮಾದರಿ ಚುನಾವಣೆ ನೀತಿ ಸಂಹಿತೆ ಹಾಗೂ ಚುನಾವಣೆ ಆಯೋಗ ನೀಡಿರುವ Advisory to political parties on plummeting level of public discourse during campaigning – https://ceo.karnataka.gov.in/uploads/media_to_upload1709706359.pdf ಅನ್ನು ಸಹ ಉಲ್ಲಂಘಿಸಿದೆ ಎಂದು ಸಹ ದೂರಲಾಗಿದೆ.

ಹಾಗಾಗಿ ದೂರುದಾರರು ಮುಖ್ಯ ಚುನಾವಣಾಧಿಕಾರಿಗಳು ಭಾರತ ಸಂವಿಧಾನದ ಅನುಚ್ಛೇದ 324ರಲ್ಲಿ ತಮಗೆ ನೀಡಿರುವ ಅಧಿಕಾರವನ್ನು ಉಪಯೋಗಿಸಿ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿದೆ.

1) ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ಉಸ್ತುವಾರಿ; J.P. ನಡ್ಡಾ ರಾಷ್ಟ್ರೀಯ ಅಧ್ಯಕ್ಷ ಬಿಜೆಪಿ, ಅಮಿತ್ ಮಾಳವೀಯ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಬಿಜೆಪಿ ಮತ್ತು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ BY ವಿಜಯೇಂದ್ರ ಇವರ ವಿರುದ್ಧ FIR ದಾಖಲಿಸುವಂತೆ ಆದೇಶಿಸಬೇಕು.

2) ಬಿಜೆಪಿ ಕರ್ನಾಟಕ – X handle ಎರಡು ದಿವಸ ಪೋಸ್ಟ್ ಮಾಡದ ಹಾಗೆ ಆದೇಶಿಸಬೇಕು

3) ಮೇಲೆ ನಮೂದಿಸಿದ X ಪೋಸ್ಟ್ ಡಿಲಿಟ್ ಮಾಡಲು ಆದೇಶಿಸಬೇಕು.

4) ಮೇಲೆ ನಮೂದಿಸಿರುವ ಜಾಹೀರಾತಿಗಾಗಿ ಬಿಜೆಪಿಯ star campaigner ನರೇಂದ್ರ ಮೋದಿಗೆ ನೋಟಿಸ್ ಜಾರಿ ಮಾಡಬೇಕು.

5) ಬಿಜೆಪಿ ಕರ್ನಾಟಕ ಪ್ರಕಟಿಸಿದ ತಪ್ಪು ಜಾಹಿರಾತಿಗೆ ಕ್ಷಮೆಯಾಚಿಸುವಂತೆ ಹಾಗೂ ಅದೇ ಸೈಜ್‌ನ ಸ್ಪಷ್ಟಿಕರಣ ನೀಡುವಂತೆ ಆದೇಶಿಸಬೇಕು.

ಇದೇ ತರಹದ ಉಲ್ಲಂಘನೆಗಳಿಗೆ ಚುನಾವಣಾ ಆಯೋಗ ಭಾರತ ರಾಷ್ಟ್ರ ಸಮಿತಿ ಅಧ್ಯಕ್ಷರಾದ ಕೆ.ಸಿ. ರಾವ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ ( https://elections24.eci.gov.in/docs/AhtgLNsZsm.pdf ) ಹಾಗೂ ಕಾಂಗ್ರೆಸ್ ಪಕ್ಷದ ರಂದೀಪ್ ಸುರ್ಜೆವಾಲಾ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ( https://elections24.eci.gov.in/docs/U4pbNwetPL.pdf ). ಹಾಗಾಗಿ ಈ ವಿಷಯದಲ್ಲೂ ಸಹ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಂಬಿಕೆ ವ್ಯಕ್ತಪಡಿಸಿದೆ.

ತಂಡದಲ್ಲಿ ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ದ್ವೇಷದ ಮಾತಿನ ವಿರುದ್ಧ ಜನಾಂದೋಲನ (CAHS), ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್ (AIDWA), ನಾವೆದ್ದು ನಿಲ್ಲದಿದ್ದರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಎಸ್ (PUCL) ಮುಂತಾದ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳಿದ್ದರು.

Join Whatsapp