ಆಲಪ್ಪುಝ: ಮೊಬೈಲ್ ಟವರ್ ಮೇಲೆ ಹತ್ತಿದ ಮಹಿಳೆಯೊಬ್ಬಳು ಟವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಮಧ್ಯೆ ಕಣಜ ಹುಳುಗಳ ದಾಳಿ ತಡೆಯಲಾಗದೆ ಕೆಳಗೆ ಹಾರಿರುವ ಘಟನೆ ಕಾಯಂಕುಳಂನಲ್ಲಿ ನಡೆದಿದೆ.
ಕಾಯಂಕುಳಂನಲ್ಲಿರುವ ಬಿಎಸ್ಎನ್ಎಲ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು 23 ವರ್ಷದ ತಮಿಳುನಾಡು ಮೂಲದ ಮಹಿಳೆ ಕಚೇರಿಗೆ ಆಗಮಿಸಿ ಶೌಚಾಲಯ ಬಳಸಲು ಅನುಮತಿ ಕೋರಿದ್ದಾಳೆ. ಸಿಬ್ಬಂದಿ ಸಂಜೆ ಕಚೇರಿಯಿಂದ ಹೊರಬರುತ್ತಿದ್ದಾಗ ಮಹಡಿಯ ಮೇಲೆ ಹೋದ ಮಹಿಳೆ ಟವರ್ ಮೇಲೆ ಹತ್ತುತ್ತಿರುವುದು ಕಂಡುಬಂದಿದ್ದು ಜೊತೆಗೆ ಪೆಟ್ರೋಲ್ ಬಾಟಲಿ ಮತ್ತು ಲೈಟರ್ ಅನ್ನು ಕೊಂಡೊಯ್ದಿದ್ದಾಳೆ.
ಟವರ್ ಮೇಲ್ಭಾಗವನ್ನು ತಲುಪಿದ ನಂತರ, ತನ್ನ ಪತಿ ತನ್ನ ಏಕೈಕ ಮಗುವನ್ನು ತೆಗೆದುಕೊಂಡು ಹೋಗಿದ್ದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಳಲು ತೋಡಿಕೊಂಡಿದ್ದಾಳೆ. ಬಿಎಸ್ಎನ್ಎಲ್ ಸಿಬ್ಬಂದಿ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಈ ಮಧ್ಯೆ ಟವರಿನ ಮೇಲಿನ ಕಣಜದ ಗೂಡು ಮಹಿಳೆಯನ್ನು ಆವರಿಸಿದ್ದು, ಕಣಜಗಳಿಂದ ಚುಚ್ಚಲ್ಪಟ್ಟ ಅವಳು ಟವರಿನಿಂದ ಇಳಿಯಲು ಪ್ರಯತ್ನಿಸಿದಳು ಮತ್ತು ನಂತರ ಅಗ್ನಿಶಾಮಕ ಸಿಬ್ಬಂದಿ ಹರಡಿದ ಬಲೆಯ ಮೇಲೆಗೆ ಮಹಿಳೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾಳೆ.